DistrictsLifestyle

ಕೈವಾರದಲ್ಲೊಂದು ವಿಶೇಷ ಮದುವೆ; ಸಪ್ತಪದಿ ತುಳಿದ ವಿಶಿಷ್ಟ ಜೋಡಿ

ಚಿಕ್ಕಬಳ್ಳಾಪುರ: ಚಿಂತಾಮಣಿ  ತಾಲ್ಲೂಕಿನ ಕೈವಾರದಲ್ಲೊಂದು ಅಪರೂಪದ ಮದುವೆ ಸಮಾರಂಭ ನಡೆದಿದೆ. ಇಲ್ಲಿ ವಧು-ವರರರಿಬ್ಬರೂ ವಿಲಕಚೇತನರು. ಇಬ್ಬರೂ ಕುಳ್ಳಗಿದ್ದಾರೆ. ಆದರೆ ಗಂಡಿಗೆ ೨೮ ವರ್ಷ, ಹೆಣ್ಣಿಗೆ ೨೫ ವರ್ಷ ವಯಸ್ಸು. ಈ ವಿನೂತನ ಜೋಡಿಯ ಮದುವೆಗೆ ಶ್ರೀಕ್ಷೇತ್ರ ಕೈವಾರ ಸಾಕ್ಷಿಯಾಗಿದೆ.

ಬೆಂಗಳೂರು ಮೂಲದ ವಿಷ್ಣು ಹಾಗೂ ಕೋಲಾರ ಮೂಲದ ಜ್ಯೋತಿ ಇಬ್ಬರೂ ಪದವೀಧರರು. ಇಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಬೆಂಗಳೂರಿನಲ್ಲೇ ಇಬ್ಬರೂ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೇಮ ಚಿಗುರಿದೆ. ಎರಡೂ ಮನೆಯವರು ಒಪ್ಪಿದ್ದರಿಂದಾಗಿ ಭಾನುವಾರ ಈ ಇಬ್ಬರ ಮದುವೆ ಕೈವಾರದಲ್ಲಿ ನಡೆದಿದೆ.

Share Post