Bengaluru

ಅಪ್ರತಿಮ ಸಾಧನೆ; ಸರ್ಕಾರಿ ಆಸ್ಪತ್ರೆ ಜವಾನನ ಮಗಳಿಗೆ 14 ಚಿನ್ನದ ಪದಕ..!

ಕಲಬುರಗಿ; ಸರ್ಕಾರಿ ಆಸ್ಪತ್ರೆಯ ಜವಾನನ ಮಗಳು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಗುಲಬರ್ಗಾ ವಿವಿಯ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 14 ಚಿನ್ನದ ಪದಕಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ. ಕಲಬುರಗಿ ತಾಲೂಕಿನ ಆಲಗೋಡ ಗ್ರಾಮದ ನಿವಾಸಿ ಹಣಮಂತರಾಯ್ ಮಗಳು ರುಕ್ಮಿಣಿ ಈ ಸಾಧನೆ ಮಾಡಿದ ವಿದ್ಯಾರ್ಥಿನಿ.

ಹಣಮಂತರಾಯ್‌ ಅವರು ಓದಿದ್ದು ಕೇವಲ ಮೂರನೇ ತರಗತಿ. ಆಸ್ಪತ್ರೆಯಲ್ಲಿ ಮೊದಲು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಹಣಮಂತರಾಯ್ ಇತ್ತೀಚೆಗಷ್ಟೇ ಅವರ ಕೆಲಸ ಖಾಯಂ ಆಗಿತ್ತು. ಹಣಮಂತರಾಯ್ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಇದರಲ್ಲಿ ರುಕ್ಮಿಣಿ ಕಿರಿಯ ಮಗಳು. ಇಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ 41 ನೇ ಘಟಿಕೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ರುಕ್ಮಿಣಿಗೆ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌ ಚಿನ್ನದ ಪದಕ ನೀಡಿ ಗೌರವಿಸಿದರು.

Share Post