CrimeNational

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ; ಕೇಂದ್ರ ಸಚಿವರ ಮನೆ ಧಗಧಗ

ಇಂಫಾಲ; ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಎರಡು ಬುಡಕಟ್ಟುಗಳ ನಡುವೆ ತಿಕ್ಕಾಟ ನಡೆಯುತ್ತಿದ್ದು, ಕಳೆದ ರಾತ್ರಿ ದುಷ್ಕರ್ಮಿಗಳು ಕೇಂದ್ರ ಸಚಿವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇಂಫಾಲದಲ್ಲಿರುವ ಕೇಂಧ್ರ ಸಚಿವ ರಾಜ್‌ಕುಮಾರ್‌ ರಂಜನ್‌ ಸಿಂಗ್‌ ಅವರ ಮನೆಗೆ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು, ಮನೆಗೆ ಬೆಂಕಿ ಇಟ್ಟಿದ್ದಾರೆ. ಇದರಿಂದಾಗಿ ಕೇಂದ್ರ ಸಚಿವರ ಇಡೀ ಮನೆ ಹೊತ್ತಿ ಉರಿದಿದೆ.

ಪರಿಶಿಷ್ಟ ಜಾತಿ ಮೀಸಲಾತಿ ವಿಚಾರವಾಗಿ ಮೈತೇಯಿ ಹಾಗೂ ಕುಕಿ ಎಂಬ ಎರಡು ಬುಡಕಟ್ಟು ಸಮುದಾಯಗಳ ನಡುವೆ ಒಂದು ತಿಂಗಳಿಂದಲೂ ಕಿತ್ತಾಟ ನಡೆಯುತ್ತಿದೆ. ಆಗಾಗ ಹಿಂಸಾಚಾರಗಳು ನಡೆಯುತ್ತಿದ್ದು, ಇದುವರೆಗೆ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ಹಿಂಸಾಚಾರ ಮತ್ತೆ ಮುಂದುವರೆದಿದೆ. ಅಲ್ಲಿ ಸರ್ಕಾರ ಸಂಧಾನಕ್ಕೆ ಮುಂದಾದರೂ ಪ್ರತಿಭಟನಾಕಾರರು ಅದಕ್ಕೆ ಬಗ್ಗುತ್ತಿಲ್ಲ. ಕೆಲ ದಿನಗಳ ಹಿಂದೆ ಉದ್ರಿಕ್ತರು ಮಣಿಪುರದ ಸಚಿವ ಹಾಗೂ ಬಿಜೆಪಿ ನಾಯಕ ನೆಮ್ಚಾ ಕೆಪ್ಗೆನ್‌ ಅವರ ಮನೆಗೆ ಬೆಂಕಿ ಹಚ್ಚಿದ್ದರು. ಇದೀಗ ಕೇಂದ್ರ ಸಚಿವರ ಮನೆಗೇ ಕೊಳ್ಳಿ ಇಟ್ಟಿದ್ದಾರೆ. ಇದ್ರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ.

Share Post