BengaluruPolitics

ಸಂಜೆಯೊಳಗೆ ಸಚಿವರಿಗೆ ಖಾತೆ ಹಂಚಿಕೆ ಸಾಧ್ಯತೆ ; ಯೋಜನೆಗಳ ಜಾರಿ ಯಾವಾಗ..?

ಬೆಂಗಳೂರು; ಇಂದು ಪೂರ್ಣ ಪ್ರಮಾಣ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಹಲವು ಮನಸ್ತಾಪಗಳ ನಡುವೆ ಎಲ್ಲಾ 34 ಸಚಿವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಈಗ ಖಾತೆ ಹಂಚಿಕೆ ತಲೆನೋವಿದೆ. ಕೆಲವರು ಇಂತಹದ್ದೇ ಖಾತೆ ಬೇಕೆಂದು ಬಯಸುತ್ತಿದ್ದಾರೆ. ಹೀಗಾಗಿ ಖಾತೆ ಹಂಚಿಕೆಯಲ್ಲೂ ಅಸಮಾಧಾನ ಉಂಟಾಗಬಹುದು. ಈ ನಡುವೆ ಇಂದೇ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸಂಜೆ ವೇಳೆ ವೇಳೆಗೆ ಖಾತೆ ಹಂಚಿಕೆಯಾಗುತ್ತೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.

ಇನ್ನೊಂದೆಡೆ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿಯಾಗಿದ್ದ ನಾಯಕರು ಈಗ ಎಲ್ಲವೂ ಮುಗಿದಿದೆ. ಇನ್ನು ಅವರು ಕೊಟ್ಟ ಭರವಸೆಗಳನ್ನು ಈಡೇರಿಸಬೇಕಿದೆ. ಮೊದಲ ಸಂಪುಟದಲ್ಲಿ ಐದು ಗ್ಯಾರೆಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಅವುಗಳನ್ನು ಈಗ ಜಾರಿಗೆ ತೆರಬೇಕಿದೆ. ಹೀಗಾಗಿ ಮುಂದೆ ನಡೆಯಲಿರುವ ಸಂಪುಟ ಸಭೆ ಕುತೂಹಲಕ್ಕೆ ಕಾರಣವಾಗಿದೆ.

ಮೊದಲ ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಮುಂದಿನ ಸಂಪುಟ ಸಭೆ ನಂತರ ಎಲ್ಲಾ ಗ್ಯಾರೆಂಟಿಗಳೂ ಜಾರಿಗೆ ಬರುತ್ತವೆ ಎಂದು ಹೇಳಿದ್ದರು. ಇನ್ನೊಂದೆಡೆ ಈಗಾಗಲೇ ಜನ ಹಾಗೂ ವಿಪಕ್ಷಗಳು ಈ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಹೀಗಾಗಿ, ಸರ್ಕಾರಕ್ಕೆ ಎಷ್ಟೇ ಕಷ್ಟವಾದರೂ ಕೊಟ್ಟ ಮಾತು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

Share Post