BengaluruPolitics

ಮೂರೂವರೆ ವರ್ಷದ ಗ್ರಹಣ ಇಂದು ಬಿಟ್ಟಿದೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಮೂರೂವರೆ ವರ್ಷದಿಂದ ರಾಜ್ಯಕ್ಕೆ ಹಿಡಿದಿದ್ದ ಗ್ರಹಣ ಇಂದು ಬಿಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಗ್ರಹಣ ಬಿಟ್ಟು, ಈ ಫಲಿತಾಂಶ ಜನರ ಕಣ್ಣೀರು ಒರೆಸಿದೆ. ಜನರಲ್ಲಿ ನಗು ತರಿಸಿದೆ ಎಂದು ಹೇಳಿದರು.

ಈ ಫಲಿತಾಂಶ ಭ್ರಷಾಚಾರದ ವಿರುದ್ಧ ಬಂದಿದೆ. ಬೆಲೆ ಏರಿಕೆ ವಿರುದ್ಧ ಜನ ತೀರ್ಪು ನೀಡಿದ್ದಾರೆ. ರೈತರಿಗೆ ಕೊಟ್ಟ ಕಿರುಕುಳದ ವಿರುದ್ಧ ಈ ಫಲಿತಾಂಶ ಬಂದಿದೆ. ಜನತೆಗೆ ಕೊಟ್ಟ ಕಷ್ಟಗಳ ವಿರುದ್ಧ ಈ ಗೆಲುವಾಗಿದೆ. ನಲವತ್ತು ಪರ್ಸೆಂಟ್‌ ಭ್ರಷ್ಟಾಚಾರದ ವಿರುದ್ಧ ಗೆಲುವಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ನಾನು ಹಾಗೂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಿ ಬಂದಿದ್ದೇವೆ. ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದು. ಅದನ್ನು ನಾವು ಮಾಡಿಯೇ ತೀರುತ್ತೇವೆ. ಏನಾದರೂ ಮಾಡಿ ಕರ್ನಾಟಕವನ್ನು ನಿಮಗೆ ಸಮರ್ಪಿಸುತ್ತೇವೆ ಎಂದು ಸೋನಿಯಾ ಗಾಂಧಿಯವರಿಗೆ ಮಾತು ಕೊಟ್ಟಿದ್ದೆವು. ಅದು ಇಂದು ಈಡೇರಿದೆ ಎಂದು ಡಿಕೆಶಿ ಇದೇ ವೇಳೆ ಹೇಳಿದರು.

ನಾಳೆ ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. ನಮ್ಮ ಪಕ್ಷದ ಸಂಪ್ರದಾಯದಂತೆ ಮುಂದಿನ ಆಯ್ಕೆ ನಡೆಯುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದರು.

Share Post