ಯಾರು ಸಿಎಂ..?; ಡಿ.ಕೆ.ಶಿವಕುಮಾರ್‌ಗೆ ಒಲಿಯುತ್ತಾ, ಸಿದ್ದರಾಮಯ್ಯ ದಕ್ಕಿಸಿಕೊಳ್ತಾರಾ..?
ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿ ಪ್ರಚಾರದ ಉಸ್ತುವಾರಿ ವಹಿಸಿದ್ದ ಬಿಜೆಪಿ ಹೈಕಮಾಂಡ್‌ಗೆ ತೀವ್ರ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರೇ ತಲೆತಗ್ಗಿಸುವಂತಹ ಆದೇಶವನ್ನು ಜನರು ನೀಡಿದ್ದಾರೆ. ಕಾಂಗ್ರೆಸ್ ಪರವಾಗಿ ಸ್ಪಷ್ಟ ಜನಾದೇಶ ಬಂದಿದೆ. ಆದ್ರೆ ಈಗ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಪ್ರಶ್ನೆ ಮೂಡಿದೆ. ಇಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ರೇಸ್‌ನಲ್ಲಿದ್ದಾರೆ. ಇಬ್ಬರೂ ಕೂಡಾ ಪ್ರಬಲರು. ಇದರಲ್ಲಿ ಯಾರಿಗೆ ಮುಖ್ಯಮಂತ್ರಿ ಸ್ಥಾನ ದಕ್ಕಿತ್ತೆ ಅನ್ನೋದೇ ಕುತೂಹಲದ ವಿಷಯ.
ಡಿ.ಕೆ.ಶಿವಕುಮಾರ್ ಪ್ಲಸ್ ಏನು..?
- ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆಯ ಪ್ರಚಾರದ ನೇತೃತ್ವ ವಹಿಸಿದ್ದರು. ಅಧ್ಯಕ್ಷರಿಗೆ ಸಿಎಂ ಸ್ಥಾನ ನೀಡೋದು ವಾಡಿಕೆ ಇದೆ
- ಕಾಂಗ್ರೆಸ್ ಹೈಕಮಾಂಡ್‌ಗೆ ತುಂಬಾ ಹತ್ತಿರದವರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಡಿಕೆಶಿ ಅಂದ್ರೆ ಪ್ರೀತಿ
- ಕಾಂಗ್ರೆಸ್ ಹೈಕಮಾಂಡ್ ಯಾವುದೇ ಟಾಸ್ಕ್ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಸಿದ ಕೀರ್ತಿ
- ಎಷ್ಟೇ ಕಾನೂನು ಕಂಟಕಗಳು ಎದುರಾದರೂ ಪಕ್ಷ ಬಿಡದೇ, ಪಕ್ಷದ ಪರವಾಗಿ ಕೆಲಸ ಮಾಡಿದ್ದು
- ಕಾಂಗ್ರೆಸ್ ನೆಲಕಚ್ಚಿದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದು
- ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ಗೆ 1.25 ಲಕ್ಷ ಮತಗಳ ಅಂತರದಲ್ಲಿ ಗೆದ್ದಿರೋದು
- ಒಕ್ಕಲಿಗರ ಮತಗಳನ್ನು ಬಹುತೇಕ ಸೆಳೆಯುವಲ್ಲಿ ಸಫಲವಾಗಿ ಬಹುಮತ ಬರಲು ಕಾರಣವಾಗಿದ್ದು
ಡಿ.ಕೆ.ಶಿವಕುಮಾರ್ ಮೈನಸ್ ಪಾಯಿಂಟ್‌ಗಳೇನು..?
- ಡಿ.ಕೆ.ಶಿವಕುಮಾರ್ ವಿರುದ್ಧ ಹಲವು ಪ್ರಕರಣಗಳಿವೆ
- ಅಕ್ರಮ ಆಸ್ತಿ ಸಂಪಾದನೆ ಕೇಸ್‌ಗಳಲ್ಲಿ ವಿಚಾರಣೆಗೆ ಅಲೆದಾಡಬೇಕಿದೆ
- ಸೋಲಿನ ಅವಮಾನದಿಂದಾಗಿ ಕೇಂದ್ರ ಸರ್ಕಾರ ಡಿಕೆಶಿ ಮೇಲೆ ಕಾನೂನು ಮೂಲಕ ಸೇಡು ತೀರಿಸಿಕೊಳ್ಳುವ ಭೀತಿ
- ಡಿ.ಕೆ.ಶಿವಕುಮಾರ್ ಪಕ್ಷವನ್ನು ಗೆಲ್ಲಿಸಿದ್ದರೂ ಹೆಚ್ಚಿನ ಶಾಸಕರು ಸಿದ್ದರಾಮಯ್ಯಗೆ ಬೆಂಬಲಿಸುವ ಸಾಧ್ಯತೆ
ಸಿದ್ದರಾಮಯ್ಯ ಅವರ ಪ್ಲಸ್ ಪಾಯಿಂಟ್‌ಗಳೇನು..?
- ಸಿದ್ದರಾಮಯ್ಯ ಅವರಿಗೆ ಇದು ಕೊನೆಯ ಚುನಾವಣೆ. ಇದೇ ಕಾರಣ ನೀಡಿ ಸಿಎಂ ಸ್ಥಾನ ಕೇಳಬಹುದು
- ಹೆಚ್ಚಿನ ಶಾಸಕರು ನನ್ನ ಪರವಾಗಿದ್ದಾರೆ ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ವಾದ ಮಂಡಿಸಬಹುದು
- ಕಳೆದ ಬಾರಿ ಸಮರ್ಥವಾಗಿ ಸರ್ಕಾರ ಮುನ್ನಡೆಸಿದ ಅನುಭವ ಇರುವುದು
- ಸಿದ್ದರಾಯ್ಯಗೆ ಡಿ.ಕೆ.ಶಿವಕುಮಾರ್ ಅವರಿಗಿಂತ ಹೆಚ್ಚು ಜನಪ್ರಿಯತೆ ಇರುವುದು
ಸಿದ್ದರಾಮಯ್ಯ ಅವರ ಮೈನಸ್ ಪಾಯಿಂಟ್‌ಗಳೇನು..?
- ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೇ ಗೆಲ್ಲೋದಕ್ಕೆ ಒದ್ದಾಡಿ. ಡಿ.ಕೆ.ಶಿವಕುಮಾರ್ ರಾಜ್ಯ ಸುತ್ತುತ್ತಿದ್ದರೆ, ಮೂರು ನಾಲ್ಕು ದಿನ ವರುಣಾದಲ್ಲಿ ಉಳಿದಿದ್ದು
- ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಡಿ.ಕೆ.ಶಿವಕುಮಾರ್ ಅವರಿಗಿಂತ ಹಿಂದೆ ಬಿದ್ದಿದ್ದು
- ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಅವರಿಗಿಂತ ಡಿ.ಕೆ.ಶಿವಕುಮಾರ್ ಮೇಲೆ ಹೆಚ್ಚು ಪ್ರೀತಿ ಇರುವುದು
- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಿದ್ದರಾಮಯ್ಯ ಅಂದ್ರೆ ಅಷ್ಟಕ್ಕಷ್ಟೇ