BengaluruCrimePolitics

ಚುನಾವಣಾ ಅಕ್ರಮ; ಕಳೆದ ಚುನಾವಣೆಗಿಂತ 4.5 ಪಟ್ಟು ಹೆಚ್ಚಳ..!

ಬೆಂಗಳೂರು; 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿಕೊಂಡರೆ ರಾಜ್ಯದಲ್ಲಿ ಚುನಾವಣಾ ಅಕ್ರಮಗಳು ನಾಲ್ಕೂವರೆ ಪಟ್ಟು ಹೆಚ್ಚು ನಡೆದಿವೆ ಎಂದು ಚುನಾವಣಾ ಆಯೋಗ ಹೇಳಿದೆ. ಆಯೋಗ  ನೀಡಿರುವ ಮಾಹಿತಿ ಪ್ರಕಾರ ಸುಮಾರು 375 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು, 145 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇದು ಇದುವರೆಗೆ ಪತ್ತೆಯಾದ ಅಕ್ರಮದ ಮಾಹಿತಿ, ಇಂದು ಮತ್ತು ನಾಳೆ ಇನ್ನೆಷ್ಟು ಅಕ್ರಮಗಳು ಪತ್ತೆಯಾಗುತ್ತವೋ ಗೊತ್ತಿಲ್ಲ.

 ಯಾವ್ಯಾವುದು ಎಷ್ಟೆಷ್ಟು ಸೀಜ್‌ ಮಾಡಲಾಗಿದೆ..?

೧. ವಶಕ್ಕೆ ಪಡೆದ ಒಟ್ಟು ನಗದು – 145.6 ಕೋಟಿ ರೂಪಾಯಿ

೨. ವಶಕ್ಕೆ ಪಡೆದ ಉಡುಗೊರೆಗಳು – 24.21 ಕೋಟಿ ರೂ. ಮೌಲ್ಯ

೩. ಪತ್ತೆಯಾದ ಮದ್ಯ                     – 83.66 ಕೋಟಿ ರೂಪಾಯಿ

೪. ಪತ್ತೆಯಾದ ಡ್ರಗ್ಸ್‌                      – 33.66 ಕೋಟಿ ರೂಪಾಯಿ

೫. ಪತ್ತೆಯಾದ ಚಿನ್ನಾಭರಣ        – 96.59 ಕೋಟಿ ರೂಪಾಯಿ

ಇವುಗಳ ಒಟ್ಟು ಮೌಲ್ಯ                     – 375.60 ಕೋಟಿ ರೂ.

 

ಜಿಲ್ಲಾವಾರು ಪತ್ತೆಯಾದ ಅಕ್ರಮಗಳು;

ಶಿವಮೊಗ್ಗ:

ವಶಪಡಿಸಿಕೊಂಡ ನಗದು ಹಣ; 13 ಕೋಟಿ 78 ಲಕ್ಷ 72 ಸಾವಿರದ 229 ರೂ.

ಜಪ್ತಿಯಾದ ಮದ್ಯ; 95 ಸಾವಿರದ 884.27 ಲೀಟರ್‌

ಜಪ್ತಿ ಮಾಡಿದ ಚಿನ್ನಾಭರಣ; 9 ಕೆಜಿ 577ಗ್ರಾಂ

ಬಾಗಲಕೋಟೆ:
ನಗದು ಹಣ : 10 ಕೋಟಿ 61 ಲಕ್ಷ ರೂ.
ವಶಪಡಿಸಿಕೊಂಡ ಮದ್ಯ ; 1 ಕೋಟಿ 50 ಲಕ್ಷ ರೂಪಾಯಿ ಮೌಲ್ಯ
ಜಪ್ತಿಯಾದ ಚಿನ್ನಾಭರಣ;  46 ಲಕ್ಷ 38 ಸಾವಿರ ಮೌಲ್ಯ
ಉಡುಗೊರೆಗಳು: 1 ಕೋಟಿ 47 ಲಕ್ಷ ರೂಪಾಯಿ ಮೌಲ್ಯ

ಬೀದರ್:
ನಗದು ಹಣ; 9 ಕೋಟಿ 82 ಲಕ್ಷ  ರೂ.
ಮದ್ಯ ಜಪ್ತಿ; 72 ಸಾವಿರದ 440 ಲೀಟರ್
ಬೆಳ್ಳಿ ವಸ್ತುಗಳ ಜತಿ ; 1 ಕೋಟಿ ರೂ. ಮೌಲ್ಯ

ಕೋಲಾರ:

ಜಪ್ತಿಯಾದ ನಗದು ಹಣ; 5 ಕೋಟಿ 40 ಲಕ್ಷ ರೂಪಾಯಿ
ವಶಪಡಿಸಿಕೊಂಡ ಮದ್ಯದ ಮೌಲ್ಯ; 96ಲಕ್ಷ 86 ಸಾವಿರ ರೂ.
ಚಿನ್ನಾಭರಣ ಮತ್ತು ಉಡುಗೊರೆ; 2 ಕೋಟಿ 34 ಲಕ್ಷ ರೂ. ಮೌಲ್ಯ

ಕಲಬುರಗಿ :
ಜಪ್ತಿಯಾದ ನಗದು ಹಣ: 5 ಕೋಟಿ ರೂ.

ಕೊಪ್ಪಳ :

ಜಪ್ತಿಯಾದ ನಗದು ಹಣ: 3 ಕೋಟಿ 91 ಲಕ್ಷದ 40 ಸಾವಿರದ 900 ರೂ.
ವಶಪಡಿಸಿಕೊಂಡ ಮದ್ಯದ ಮೌಲ್ಯ; 7ಲಕ್ಷ 40 ಸಾವಿರ ರೂ.
ಚಿನ್ನಾಭರಣ ಜಪ್ತಿ: 1 ಲಕ್ಷದ24 ಸಾವಿರದ 088 ರೂ.

ಮಂಡ್ಯ :
ಹಣ ಜಪ್ತಿ; 3 ಕೋಟಿ 48 ಲಕ್ಷದ 48 ಸಾವಿರದ 253 ರೂ.
ವಶಪಡಿಸಿಕೊಂಡ ಮದ್ಯದ ಮೌಲ್ಯ; 2 ಕೋಟಿ 35 ಲಕ್ಷದ 21 ಸಾವಿರದ 991 ರೂ.
ವಶಪಡಿಸಿಕೊಂಡ ಡ್ರಗ್ಸ್; 55 ಸಾವಿರದ 550 ರೂ.

ಬಳ್ಳಾರಿ:
ವಶಪಡಿಸಿಕೊಂಡ ನಗದು; 1 ಕೋಟಿ 33 ಲಕ್ಷ ರೂ.
ಜಪ್ತಿಯಾದ ಮದ್ಯದ ಮೌಲ್ಯ; 54 ಲಕ್ಷ ರೂ.
ಚಿನ್ನಾಭರಣ ಜಪ್ತಿ: 33 ಲಕ್ಷ ಮೌಲ್ಯ

ವಿಜಯನಗರ :

ಜಪ್ತಿಯಾದ ನಗದು ಹಣ; 1 ಕೋಟಿ 50 ಲಕ್ಷ ರೂಪಾಯಿ
ಜಪ್ತಿಯಾದ ಮದ್ಯದ ಮೌಲ್ಯ;  3.5 ಕೋಟಿ ರೂ.
ಚಿನ್ನಾಭರಣ ಜಪ್ತಿ: 5.5 ಕೋಟಿ ರೂಪಾಯಿ

ವಿಜಯಪುರ :

ನಗದು ಹಾಗೂ ಉಡುಗೊರೆಗಳು; 2.03 ಕೋಟಿ ರೂ.
ಮದ್ಯ ಜಪ್ತಿ: 45.59 ಲಕ್ಷ ರೂ.

 

Share Post