BengaluruCrimePolitics

ಚುನಾವಣೆ ಸಮಯದಲ್ಲೇ ಶಾಲೆಗೆ ಬಾಂಬ್‌ ಬೆದರಿಕೆ; ಮೇಲ್‌ ಬಂದಿದ್ದು ಎಲ್ಲಿಂದ..?

ಬೆಂಗಳೂರು; ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಸಿದ್ಧತೆ ನಡೆದಿದೆ. ಇಂತಹ ಸಮಯದಲ್ಲೇ ಶಾಲೆಯೊಂದಿಗೆ ಬಾಂಬ್‌ ಬೆದರಿಕೆ ಬಂದಿದೆ. ಇ-ಮೇಲ್‌ ಮೂಲಕ ಶಾಲೆಯಲ್ಲಿ ಬಾಂಬ್‌ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ಆನೆಕಲ್‌ ತಾಲ್ಲೂಕಿನ ಹೆಬ್ಬಗೋಡಿಯ ಖಾಸಗಿ ಶಾಲೆಗೆ ಈ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದೆ. ಇದನ್ನು ನೋಡಿದ ಸಿಬ್ಬಂದಿ ಆತಂಕಗೊಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೆಬ್ಬಗೋಡಿ ಪೊಲೀಸರು, ಶಾಲಾ ಸಿಬ್ಬಂದಿಯನ್ನು ಆಚೆಗೆ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ.

ಬೇಸಿಗೆ ರಜೆ ಇದ್ದುದರಿಂದ ಮಕ್ಕಳು ಶಾಲೆಯಲ್ಲಿರಲಿಲ್ಲ. ಬದಲಾಗಿ ಶಾಲೆಯಲ್ಲಿ ಮುಂದಿನ ವರ್ಷಕ್ಕೆ ದಾಖಲಾತಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದ್ರೆ ಪರಿಶೀಲನೆ ಯಾವುದೇ ಸ್ಪೋಟಕ ಇರುವುದು ಮತ್ತೆಯಾಗಿಲ್ಲ. ಕೆಲ ತಿಂಗಳ ಹಿಂದೆ ಇದೇ ಶಾಲೆಗೆ ಇಂತಹದ್ದೇ ಒಂದು ಬೆದರಿಕೆ ಇ-ಮೇಲ್‌ ಬಂದಿತ್ತು. ಚುನಾವಣೆ ಸಮಯದಲ್ಲಿ ಈ ಬೆದರಿಕೆ ಬಂದಿರುವುದರಿಂದ ಭದ್ರತಾ ಸಿಬ್ಬಂದಿ ವಿಶೇಷ ಗಮನ ನೀಡಿದ್ದಾರೆ. ಬೇರೆ ಕಡೆಗಳಲ್ಲೂ ಹೆಚ್ಚಿನ ಅಲರ್ಟ್‌ ಮಾಡಲಾಗಿದೆ.

Share Post