BengaluruDistrictsPolitics

BJP CASE; ಬಿಜೆಪಿ ಭ್ರಷ್ಟ ದರಪಟ್ಟಿ ವಿಚಾರ; ಕಾಂಗ್ರೆಸ್‌ ವಿರುದ್ಧ ಮಾನನಷ್ಟ ಮೊಕದ್ದಮೆ

ಹಾಸನ; ಕಾಂಗ್ರೆಸ್‌ ಪಕ್ಷ ಇಂದು ಬಿಜೆಪಿ ಭ್ರಷ್ಟ ದರಪಟ್ಟಿಯನ್ನು ರಿಲೀಸ್‌ ಮಾಡಿದೆ. ಜೊತೆಗೆ ಎಲ್ಲಾ ಪತ್ರಿಕೆಗಳಲ್ಲೂ ಈ ಬಗ್ಗೆ ಜಾಹಿರಾತು ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆ 2500 ಕೋಟಿ ರೂಪಾಯಿಗೆ ಹರಾಜಾಗಿತ್ತು ಎಂದು ಈ ಪಟ್ಟಿಯ ಮೂಲಕ ಆರೋಪಿಸಲಾಗಿದೆ. ಇದರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕರು, ಕಾಂಗ್ರೆಸ್‌ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನ ಮಾಡಿದ್ದಾರೆ.

ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಜಾಹೀರಾತನ್ನು ಗಮನಿಸಿದ್ದೇನೆ. ಕಾಂಗ್ರೆಸ್‌ನವರು ಈ ರೀತಿಯ ರಾಜಕೀಯ ಮಾಡಬಾರದು. ಇದರಿಂದ ಬಿಜೆಪಿ ಪಕ್ಷಕ್ಕೆ ಮಾನನಷ್ಟವಾಗಿದೆ. ನಾನು ಈಗಾಗಲೇ ವಕೀಲರ ಜೊತೆ ಮಾತನಾಡಿದ್ದೇನೆ. ಕಾಂಗ್ರೆಸ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಹೇಳಿದ್ದಾರೆ.

Share Post