Pakistan; ಪಾಕ್‌ಗೆ ಗುಪ್ತ ಮಾಹಿತಿ ರವಾನಿಸ್ತಿದ್ರಂತೆ ಈ ವಿಜ್ಞಾನಿ
ಮುಂಬೈ; ಭಾರತದಲ್ಲಿದ್ದುಕೊಂಡು ನಮ್ಮ ದೇಶದ ಗುಪ್ತ ಮಾಹಿತಿಯನ್ನು ನೆರೆಯ ಪಾಕಿಸ್ತಾಕ್ಕೆ ಕೊಡುತ್ತಿದ್ದ ಅಧಿಕಾರಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನಿ ಏಜೆಂಟ್ ಒಬ್ಬನಿಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯಲ್ಲಿ ಆರೋಪಿ ಉನ್ನತ ಹುದ್ದೆಯಲ್ಲಿದ್ದರು. ಅವರು ವಾಟ್ಸ್ ಆಪ್ ಹಾಗೂ ವಿಡಿಯೋ ಕರೆಗಳ ಮೂಲಕ ಪಾಕಿಸ್ತಾನದ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ. ವಿಜ್ಞಾನಿಗೆ ಹನಿಟ್ರ್ಯಾಪ್ ಮಾಡಿ, ಬೆದರಿಸಿ ಮಾಹಿತಿ ತರಿಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ನಮ್ಮ ದೇಶದ ರಹಸ್ಯ ಮಾಹಿತಿಯನ್ನು ಶತ್ರು ದೇಶಗಳಿಗೆ ನೀಡುವಂತಿಲ್ಲ, ಅದು ದೇಶದ ಭದ್ರತೆಗೆ ತೊಂದರೆಯಾಗುತ್ತದೆ. ಇದು ಗೊತ್ತಿದ್ದರೂ ಅಧಿಕಾರಿ ಮಾಹಿತಿ ಲೀಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎಟಿಎಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಆರೋಪಿಯಿಂದ ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.