Congress Stand; ಭಜರಂಗದಳ ನಿಷೇಧ ಅಂದ್ರೆ ಬಿಜೆಪಿಗೆ ಯಾಕೆ ಗಾಬರಿ..?; ಡಿ.ಕೆ.ಶಿವಕುಮಾರ್ ಪ್ರಶ್ನೆ
ಬೆಂಗಳೂರು; ಸಮಾಜದ ಶಾಂತಿ ಕದಡುವ ಸಂಘಟನೆಯ ನಿಷೇಧಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯ ನಂತರ ಅವರು ಮಾಧ್ಯಗಳೊಂದಿಗೆ ಮಾತನಾಡಿದರು. ಭಜರಂಗದಳ ನಿಷೇಧ ಎಂದು ಹೇಳಿದರೆ ಬಿಜೆಪಿಯವರಿಗೆ ಯಾಕೆ ಗಾಬರಿ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಮಾಜದ ಶಾಂತಿ ಕದಡಲು ಪ್ರತ್ನಿಸುವ ಯಾವುದೇ ಸಂಘಟನೆಯನ್ನು ನಿಷೇಧ ಮಾಡುತ್ತೇನೆ. ಅದು ಪಿಎಫ್ಐ ಆಗಲೀ, ಬಜರಂಗದಳ ಆಗಲಿ, ಶಾಂತಿ ಕದಡಿದರೆ ನಿಷೇಧ ಎಂದು ಹೇಳಲಾಗಿತ್ತು. ಇದನ್ನೇ ಬಿಜೆಪಿ ಅಸ್ತ್ರವಾಗಿಸಿಕೊಂಡು ಜೈ ಭಜರಂಗಿ ಎಂದು ಕೂಗುತ್ತಿದೆ. ಈ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಭಜರಂಗದಳಕ್ಕೂ ಹನುಮಂತನಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಪ್ರಚೋದಿಸುತ್ತಿದೆ ಅನ್ನೋದು ಜನರಿಗೆ ಅರ್ಥವಾಗಿದೆ. ಬಿಜೆಪಿ ಬಜರಂಗಿ ಎಂದು ಕ್ಯಾಂಪೇನ್ ಮಾಡೋದು ಬಿಟ್ಟು, ಹೊಟ್ಟೆಗೆ ಏನು ನೀಡಿದ್ದೀರಿ ಅನ್ನೋದನ್ನು ಮೊದಲು ಹೇಳಿ, ಉದ್ಯೋಗ ಯಾರಿಗೆ ಕೊಟ್ಟಿದ್ದೇನೆ ಎಂಬುದನ್ನು ಹೇಳಿ ಎಂದು ಡಿ.ಕೆ.ಶಿವಕುಮಾರ್ ಬಿಜೆಪಿಗೆ ಸಲಹೆ ನೀಡಿದ್ದಾರೆ.
ಆಂಜನೇಯನಿಗೂ ಬಜರಂಗದಳಕ್ಕೂ ಯಾವುದೇ ಸಂಬಂಧ ವಿಲ್ಲ. ಆಂಜನೇಯ ಬೇರೆ, ಭಜರಂಗದಳ ಬೇರೆ. ನಾನೂ ಕೂಡಾ ಅಂಜನೇಯನ ಭಕ್ತ. ಬಿಜೆಪಿಯವರು ಮಾತ್ರ ಆಂಜನೇಯನ ಭಕ್ತರಲ್ಲ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದ್ದಾರೆ.