DistrictsPolitics

Taliban Government; ಕಾಂಗ್ರೆಸ್‌ ಗೆದ್ದರೆ ತಾಲಿಬಾನ್‌ ಸರ್ಕಾರ ರಚನೆ; ಸಂಸದ ಪ್ರತಾಪ್‌ ಸಿಂಹ

ಮೈಸೂರು; ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅದು ಕನ್ನಡಿಗರ ಸರ್ಕಾರ ಆಗೋದೇ ಇಲ್ಲ. ಅದು ತಾಲಿಬಾನ್‌ ಸರ್ಕಾರವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಭಜರಂಗದಳ ನಿಷೇಧ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಕನಕಪುರದಲ್ಲಿ ಶಿವನ ಬೆಟ್ಟವನ್ನು ಏಸುಬೆಟ್ಟವಾಗಿ ಡಿ.ಕೆ.ಶಿವಕುಮಾರ್‌ ಪರಿವರ್ತನೆ ಮಾಡಿದರು. ಸಿದ್ದರಾಮಯ್ಯ ಅವರು ಹನುಮಂತನ ಜನ್ಮದಿನವನ್ನೇ ಪ್ರಶ್ನೆ ಮಾಡಿದ್ದಾರೆ. ಹೀಗೆ ಭಜರಂಗಿ ಬಗ್ಗೆಯೇ ಮಾತನಾಡುವ ಇವರ ನವರಂಗಿ ನಾಟಕ ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ಒಂದು ವೇಳೆ ಎಲ್ಲಾ ಗೊತ್ತಿದ್ದೂ ಜನರು ಅವರಿಗೆ ಅಧಿಕಾರ ಕೊಟ್ಟರೆ, ಲಾಡೆನ್‌ ಅಥವಾ ಉಮರ್‌ ಮುಲ್ಲಾ ರೀತಿಯ ಸರ್ಕಾರ ರಚನೆ ಮಾಡ್ತಾರೆ ಎಂದು ಲೇವಡಿ ಮಾಡಿದರು.

ಪಠ್ಯ ಪುಸ್ತಕಗಳಲ್ಲಿ ಘಜ್ನಿ ಮಹಮ್ಮದ್‌, ಟಿಪ್ಪು ಸುಲ್ತಾನ್ ನನ್ನು ವೈಭವೀಕರಿಸಿದ್ದರು. ಭಜರಂಗದಳದವರು ಹಿಂದತ್ವದ ರಕ್ಷಣೆ ಮಾಡುತ್ತಿದ್ದಾರೆ. ಗೋಮಾತೆಯ ರಕ್ಷಣೆಗಾಗಿ ಹಗಳಿರುಳೂ ಶ್ರಮಿಸುತ್ತಿದ್ದಾರೆ. ಹೀಗಿದ್ದರೂ ಅವರು ಭಜರಂಗದಳ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ರಾಜ್ಯ ಪರಿಸ್ಥಿತಿ ಏನು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಾಪ ಸಿಂಹ ಹೇಳಿದರು.

Share Post