Bommai Reaction; ಭಜರಂಗದಳ ನಿಷೇಧ ಮಾಡೋ ಅಧಿಕಾರ ಕಾಂಗ್ರೆಸ್‌ಗಿಲ್ಲ; ಬೊಮ್ಮಾಯಿ
ಹುಬ್ಬಳ್ಳಿ; ಕಾಂಗ್ರೆಸ್‌ನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಭಜರಂಗ ದಳ ನಿಷೇಧ ಮಾಡೋದಾಗಿ ಹೇಳಿದ್ದಾರೆ. ಆದ್ರೆ ಹಾಗೆ ಮಾಡೋದಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಆ ಅಧಿಕಾರ ಅವರಿಗೆ ಇಲ್ಲವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಯಾವುದೇ ಸಂಘಟನೆಯ ನಿಷೇಧ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಆದ್ರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲಿ ಯಾವತ್ತೂ ಕಾಂಗ್ರೆಸ್ ಸರ್ಕಾರ ಬರೋದಿಲ್ಲ. ರಾಜ್ಯದಲ್ಲೂ ಕೂಡಾ ಕಾಂಗ್ರೆಸ್ ಸರ್ಕಾರ ಬರೋದು ಕನಸು ಅಷ್ಟೇ. ಹೀಗಿದ್ಮೇಲೆ ಅವರು ಅದು ಹೇಗೆ ಭಜರಂಗದಳವನ್ನು ನಿಷೇಧ ಮಾಡುತ್ತಾರೆ ಎಂದು ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.