DistrictsPolitics

Shetter Handbill politics; ಕೊನೆ ಚುನಾವಣೆ ಅಸ್ತ್ರ ಪ್ರಯೋಗಿಸಿದ ಜಗದೀಶ್‌ ಶೆಟ್ಟರ್‌

ಧಾರವಾಡ; ಬಿಜೆಪಿ ಕಾಂಗ್ರೆಸ್‌ ಸೇರಿರುವ ಧಾರವಾಡ-ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ. ಅದ್ರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವರು ಶೆಟ್ಟರ್‌ ವಿರುದ್ಧ ಮುಗಿಬಿದ್ದಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸೋ ಹೊಣೆ ನನ್ನದು ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ಬೆನ್ನಲ್ಲೇ ಜಗದೀಶ್‌ ಶೆಟ್ಟರ್‌ ಕೊನೇ ಚುನಾವಣೆಯ ಅಸ್ತ್ರ ಪ್ರಯೋಗಿಸಿದ್ದಾರೆ. ಈ ಮೂಲಕ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಮುಂದಾಗಿದ್ದಾರೆ.

ಶೆಟ್ಟರ್‌ ಹೆಸರಲ್ಲಿ ಚುನಾವಣಾ ಪ್ರಚಾರ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತಿದೆ. ಅದರಲ್ಲಿ ಶೆಟ್ಟರ್‌ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನನಗೆ ಇದು ಕೊನೆಯ ಚುನಾವಣೆ. ನಾನು ಈ ಬಾರಿ ಚುನಾವಣೆಗೆ ನಿಂತು ನಿವೃತ್ತಿಯಾಗಬೇಕು ಅಂದುಕೊಂಡಿದ್ದೆ. ಆದ್ರೆ ಬಿಜೆಪಿಯವರು ನನಗೆ ಅವಮಾನ ಮಾಡಿದರು. ಈ ಕಾರಣಕ್ಕಾಗಿ ನಾನು ಸ್ವಾಭಿಮಾನಕ್ಕಾಗಿ ಕಾಂಗ್ರೆಸ್‌ಗೆ ಬಂದು ಸ್ಪರ್ಧೆ ಮಾಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಮತದಾರರು ಎಂದಿನಂತೆ ನನ್ನ ಕೈಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಶೆಟ್ಟರ್‌ ಹೇಳಿಕೊಂಡಿದ್ದಾರೆ.

ನಾನು ನಾಲ್ಕು ದಶಕಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಆದ್ರೆ ಕೆಲವರು ನನಗೇ ಅವಮಾನ ಮಾಡಿದರು. ಮೊದಲೇ ಕರೆದು ಹೇಳಿದ್ದಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದ್ರೆ ನನಗೆ ಅವಮಾನ ಮಾಡಲೆಂದೇ ನನಗೆ ಟಿಕೆಟ್‌ ನಿರಾಕರಿಸಿ ಅವಮಾನ ಮಾಡಿದರು ಎಂದು ಕರಪತ್ರದಲ್ಲಿ ಜಗದೀಶ್‌ ಶೆಟ್ಟರ್‌ ಹೇಳಿಕೊಂಡಿದ್ದಾರೆ.

Share Post