BengaluruPolitics

ನಾಮಪತ್ರ ವಾಪಸ್‌ ಪಡೆದವರು ಯಾರು..?, ಕಣದಲ್ಲಿ ಉಳಿದವರು ಯಾರು..?

ಬೆಂಗಳೂರು; ನಿನ್ನೆ ನಾಮಪತ್ರ ವಾಪಸ್‌ ಪಡೆಯುವುದಕ್ಕೆ ಕಡೆಯ ದಿನವಾಗಿತ್ತು. ಬಂಡಾಯವಾಗಿ ಸ್ಪರ್ಧೆ ಮಾಡಿದ್ದವರಿಂದ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮಾಡಲು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಕೊನೆಯ ತನಕ ಕಸರತ್ತು ಮಾಡಿದವು. ಹಲವು ಆಮಿಷಗಳನ್ನು ನೀಡಿದ ಮನವೊಲಿಕೆ ತಂತ್ರಗಳನ್ನು ಅನುಸರಿಸಿದವು. ಆದ್ರೆ ಇದಕ್ಕೆ ಕೆಲವರು ಮಾತ್ರ ತಲೆಬಾಗಿದರು. ಉಳಿದವರು ಯಾವ ಕಾರಣಕ್ಕೂ ನಾಮಪತ್ರ ವಾಪಸ್‌ ಪಡೆಯಲಿಲ್ಲ. ಹಾಗಾದ್ರೆ ನಾಮಪತ್ರ ವಾಪಸ್‌ ಪಡೆದುಕೊಂಡವರು ಯಾರು..?, ಕಣದಲ್ಲಿ ಹಾಗೆಯೇ ಉಳಿದು ಸವಾಲೆಸೆದವರು ಯಾರು..? ಇಲ್ಲಿದೆ ಮಾಹಿತಿ

ಸಂಧಾನಕ್ಕೆ ಮಣಿಯದೆ ಕಣದಲ್ಲಿ ಉಳಿದವರು;
==============================
1. ಅಖಂಡ ಶ್ರೀನಿವಾಸಮೂರ್ತಿ (ಪುಲಕೇಶಿನಗರ) – ಕಾಂಗ್ರೆಸ್ ಬಂಡಾಯ
2. ಸೌಭಾಗ್ಯ ಬಸವರಾಜನ್ (ಚಿತ್ರದುರ್ಗ) – ಕಾಂಗ್ರೆಸ್ ಬಂಡಾಯ
3. ಗೂಳಿಹಟ್ಟಿ ಶೇಖರ್ (ಹೊಸದುರ್ಗ) – ಬಿಜೆಪಿ ಬಂಡಾಯ
4. ಕೃಷ್ಣಯ್ಯ ಶೆಟ್ಟಿ (ಗಾಂಧಿನಗರ) – ಬಿಜೆಪಿ ಬಂಡಾಯ
5. ಅರುಣ್‍ಕುಮಾರ್ ಪುತ್ತಿಲ (ಪುತ್ತೂರು) – ಬಿಜೆಪಿ ಬಂಡಾಯ
6. ಮಾಡಾಳ್ ಮಲ್ಲಿಕಾರ್ಜುನ್ (ಚನ್ನಗಿರಿ) – ಬಿಜೆಪಿ ಬಂಡಾಯ
7. ವಿಜಯಾನಂದ (ಮಂಡ್ಯ) – ಜೆಡಿಎಸ್ ಬಂಡಾಯ

ನಾಮಪತ್ರ ವಾಪಸ್‌ ಪಡೆದು ಸಂಧಾನಕ್ಕೆ ಮಣಿದವರು
==============================
೧. ಗಂಗಾಂಬಿಕೆ (ಕಾಂಗ್ರೆಸ್) – ಚಿಕ್ಕಪೇಟೆ
೨. ಮಹದೇವಪ್ಪ ಯಾದವಾಡ (ಬಿಜೆಪಿ) – ರಾಮದುರ್ಗ
೩. ಶಾರದಾ ಶೆಟ್ಟಿ (ಕಾಂಗ್ರೆಸ್) – ಕುಮಟಾ (ರಾಜಕೀಯ ನಿವೃತ್ತಿ)
೪. ರಾಮಣ್ಣ ಲಮಾಣಿ (ಬಿಜೆಪಿ) – ಶಿರಹಟ್ಟಿ
೫. ಬಸನಗೌಡ ಬಾದರ್ಲಿ (ಕಾಂಗ್ರೆಸ್) – ಸಿಂಧನೂರು
೬. ಕೃಷ್ಣೇಗೌಡ (ಕಾಂಗ್ರೆಸ್) – ಅರಕಲಗೂಡು
೭. ರಾಜೇಶ್ ಗೌಡ (ಬಿಜೆಪಿ) – ಕುಣಿಗಲ್
೮. ಅಶೋಕ್ ಬಾಣಾವರ (ಜೆಡಿಎಸ್) – ಅರಸಿಕೆರೆ

 

Share Post