ರಾಮದಾಸ್ ಬಾಚಿ ತಬ್ಬಿದ ಅಮಿತ್ ಶಾ; ಮುನಿಸು ಮರೆತ ಕೆಆರ್ ಶಾಸಕ
ಮೈಸೂರು; ಕೆಆರ್ ಕ್ಷೇತ್ರ ಟಿಕೆಟ್ ವಂಚಿತ ಹಾಗೂ ಹಾಲಿ ಶಾಸಕ ಎಸ್.ಎ.ರಾಮದಾಸ್‌ರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಬಾಚಿ ತಬ್ಬಿಕೊಂಡು ಬೆನ್ನು ತಟ್ಟಿದ ಘಟನೆ ನಡೆದಿದೆ. ಅಮಿತ್ ಶಾ ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಶಾಸಕ ರಾಮದಾಸ್ ಅವರು ಶಾ ಭೇಟಿಯಾದರು.
ಅಮಿತ್ ಶಾ ಅವರು ರಾಮದಾಸ್ ಅವರನ್ನು ನೋಡುತ್ತಲೇ ಖುಷಿಯಿಂದ ಹತ್ತಿರಕ್ಕೆ ಕರೆದರು. ಬಾಚಿ ತಬ್ಬಿಕೊಂಡು ಸಂತಸ ಹಂಚಿಕೊಂಡರು. ರಾಮದಾಸ್ ಅವರಿಗೆ ಈ ಬಾರಿ ಕೆಆರ್ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದೆ. ಆದರೂ ಅವರು ಬಂಡಾಯವೇಳದೇ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಅವರ ಈ ನಿಲುವಿಗೆ ಮೋದಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅಮಿತ್ ಶಾ ಕೂಡಾ ರಾಮದಾಸ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ರಾಮದಾಸ್, ನನಗೆ ಅನಾರೋಗ್ಯವಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ಸ್ವಾಗತ ಕೋರಬೇಕಾಗಿರುವುದು ನನ್ನ ಕರ್ತವ್ಯ. ಹೀಗಾಗಿ ಅವರನ್ನು ಆತ್ಮೀಯವಾಗಿ ಸ್ವಾಗತ ಕೋರಿದೆ. ಈ ವೇಳೆ ಅವರು ತುಂಬಾ ಆತ್ಮೀಯತೆ ತೋರಿಸಿದರು. ಇದರಿಂದ ನನಗೆ ಖುಷಿಯಾಯಿತು.