BengaluruCinemaNational

ʻಮತ್ತೆ ಮದುವೆʼ ಚಿತ್ರದ ಟೀಸರ್‌ ರಿಲೀಸ್‌; ಮೈಸೂರು ಲಾಡ್ಜ್‌ ದೃಶ್ಯ ಇದೆ..!

ಹೈದರಾಬಾದ್‌; ತೆಲುಗು ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ ನಡುವಿನ ಸಂಬಂಧದ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಈ ಇಬ್ಬರ ಲವ್‌ ಸ್ಟೋರಿಯನ್ನಿಟ್ಟುಕೊಂಡೇ ಮತ್ತೆ ಮದುವೆ ಹೆಸರಿನಲ್ಲಿ ಚಿತ್ರ ಮಾಡಿರುವುದೂ ಎಲ್ಲರಿಗೂ ಗೊತ್ತಿದೆ. ಇದೀಗ ಈ ಚಿತ್ರ ಟೀಸರ್‌ ರಿಲೀಸ್‌ ಆಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಈ ಟೀಸರ್‌ನಲ್ಲಿ ಮೈಸೂರಿನ ಲಾಡ್ಜ್‌ ಒಂದರಲ್ಲಿ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಸಿಕ್ಕಿಹಾಕಿಕೊಂಡ ನೈಜ ದೃಶ್ಯವನ್ನೂ ಸೇರಿಸಲಾಗಿದೆ.

ನರೇಶ್‌ ಅವರ ಎರಡನೇ ಪತ್ನಿ ರಮ್ಯಾ ಅವರು ವರ್ಷ ಹಿಂದೆ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ವಿರುದ್ಧ ಸಮರ ಸಾರಿದ್ದರು. ಇದೇ ಸಂದರ್ಭದಲ್ಲೇ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಅವರು ಮೈಸೂರಿನ ಲಾಡ್ಜ್‌ ಒಂದರಲ್ಲಿ ಒಟ್ಟಿಗೆ ಸಿಕ್ಕಿದ್ದರು. ಈ ದೃಶ್ಯಗಳು ಮಾದ್ಯಮಗಳಲ್ಲಿ ಪ್ರಸಾರವಾಗಿದ್ದವು. ಈ ಸನ್ನಿವೇಶವನ್ನು ಕೂಡಾ ಚಿತ್ರದಲ್ಲಿ ಸೇರಿಸಲಾಗಿದೆಯಂತೆ. ಅದರ ಒಂದು ತುಣುಕನ್ನು ಚಿತ್ರದ ಟೀಸರ್‌ನಲ್ಲಿ ಸೇರಿಸಲಾಗಿದೆ.

Share Post