ಮ್ಯಾನ್ಮಾರ್ ಗಡಿಯಲ್ಲಿ ಕಂಪಿಸಿದ ಭೂಮಿ
ನವದೆಹಲಿ: ಇಂದು ಬೆಳಗ್ಗೆ ಮ್ಯಾನ್ಮಾರ್ – ಭಾರತದ ಗಡಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ. ಈ ಬಗ್ಗೆ ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಭೂಕಂಪವು ಬಾಂಗ್ಲಾದೇಶದ ಚಿತ್ತಗಾಂಗ್ನಿಂದ 174 ಕಿ.ಮೀ ಪೂರ್ವಕ್ಕೆ ಅಪ್ಪಳಿಸಿದೆ. ಪೂರ್ವ ಭಾರತದ ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂನಲ್ಲಿ ಕಂಪನವಾಗಿದೆ ಎಂದು ಭೂಕಂಪನ ಕೇಂದ್ರ ತಿಳಿಸಿದೆ.
EMSC ಅಂದರೆ ಯೂರೊ-ಮೆಡಿಟರೇನಿಯನ್ ಭೂಕಂಪನ ಕೇಂದ್ರ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಾಹಿತಿ ಪ್ರಕಾರ, ಕೊಲ್ಕತ್ತಾ ಮತ್ತು ಗುವಾಹಟಿಯ ಹೆಚ್ಚಿನ ಭಾಗಗಳಲ್ಲಿ ಭೂಕಂಪನವು ಸುಮಾರು 30 ಸೆಕೆಂಡುಗಳ ಕಾಲ ಸಂಭವಿಸಿತು. ದೀರ್ಘವಾದ ಅಲುಗಾಡುವಿಕೆಯ ಅನುಭವ ಆಗಿತ್ತು. ಜೊತೆಗೆ ಅದರ ಪರಿಣಾಮಗಳನ್ನು ಅನುಭವಿಸಲಾಯಿತು ಎಂದು ಬರೆದುಕೊಂಡಿದೆ.