Uncategorized

ಹಳೆಯ ಅಂಬಾಸಿಡರ್‌ ಕಾರಿನಲ್ಲಿ ಯಡಿಯೂರಪ್ಪ ಪ್ರಯಾಣ; ಏನಿದರ ವಿಶೇಷತೆ..?

ಶಿಕಾರಿಪುರ; ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಮೊದಲ ಕಾರಿನಲ್ಲಿ ಪ್ರಯಾಣ ಮಾಡಿ ಗಮನ ಸೆಳೆದಿದ್ದಾರೆ. ಅಂಬಾಸಿಡರ್‌ ಕಾರಿನ ಸಂಖ್ಯೆ ಸಿಕೆಆರ್‌ 45 ಯಡಿಯೂರಪ್ಪ ಅವರ ಮೊದಲ ಕಾರು. ಅದು ಅವರ ಲಕ್ಕಿ ಕಾರು ಕೂಡಾ ಹೌದು. ಇಂದು ಪುತ್ರ ವಿಜಯೇಂದ್ರ ನಾಮಪತ್ರ ಸಲ್ಲಿಸಿದ್ದರಿಂದ ಶಿಕಾರಿಪುರದಕ್ಕೆ ಬಂದಿದ್ದ ಯಡಿಯೂರಪ್ಪ ಅವರು, ತಮ್ಮ ಹಳೆಯ ಅಂಬಾಸಿಡರ್‌ ಕಾರಿನಲ್ಲಿ ಶಿಕಾರಿಪುರದ ಬಿಜೆಪಿಗೆ ತೆರಳಿದರು.

ಅಂಬಾಸಿಡರ್‌ ಕಾರಿನಲ್ಲಿ ಯಡಿಯೂರಪ್ಪ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಕೂಡಾ ಪ್ರಯಾಣಿಸಿದರು. ಯಡಿಯೂರಪ್ಪ ತಮಗಿಷ್ಟದ ವಸ್ತುಗಳನ್ನು ಎಷ್ಟು ವರ್ಷಗಳಾದರೂ ಹಾಗೆಯೇ ಇಟ್ಟುಕೊಳ್ಳುತ್ತಾರೆ. ಅವುಗಳನ್ನು ಲಕ್ಕಿ ಎಂದೇ ಅವರು ಭಾವಿಸುತ್ತಾರೆ. ಅಂತಹವುಗಳಲ್ಲಿ ಈ ಅಂಬಾಸಿಡರ್‌ ಕಾರು ಕೂಡಾ ಒಂದು. ಈ ಕಾರಣಕ್ಕಾಗಿಯೇ ಮಗ ವಿಜಯೇಂದ್ರ ಒಳ್ಳೆಯದಾಗಲಿ ಎಂದು ತಮ್ಮ ಲಕ್ಕಿ ಕಾರಿನಲ್ಲಿ ಯಡಿಯೂರಪ್ಪ ಪ್ರಯಾಣಿಸಿದ್ದಾರೆ.

 

Share Post