BengaluruCrimePolitics

ಬೆಂಗಳೂರಿನಲ್ಲಿ 1 ಕೋಟಿ ರೂಪಾಯಿ ನಗದು ವಶ

ಬೆಂಗಳೂರು; ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಒಂದು ಕೋಟಿ ರೂಪಾಯಿ ನಗದು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಹಣವನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು ಹಲಸೂರು ಗೇಟ್‌ ಚೆಕ್‌ಪೋಸ್ಟ್‌ ಬಳಿ ವ್ಯಕ್ತಿಯನ್ನು ಬ್ಯಾಗ್‌ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ. ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಒಂದು ಕೋಟಿ ರೂಪಾಯಿ ನಗದು ಸಿಕ್ಕಿದೆ.

ಹಣದ ಮೂಲದ ಬಗ್ಗೆ ಕೇಳಿದಾಗಿ ವ್ಯಕ್ತಿ ಯಾವುದೇ ಉತ್ತರ ನೀಡಿಲ್ಲ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಒದಗಿಸಿಲ್ಲ. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದು, 1 ಕೋಟಿ ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ವ್ಯಕ್ತಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಚುನಾವಣೆಯಲ್ಲಿ ಜನರಿಗೆ ಹಂಚಲು ಈ ಹಣ ತೆಗೆದುಕೊಂಡು ಹೋಗುತ್ತಿರಬಹುದೆಂದು ಶಂಕೆ ವ್ಯಕ್ತವಾಗಿದೆ.

 

Share Post