ವೈಎಸ್ವಿ ದತ್ತಾ ಮತ್ತೆ ಜೆಡಿಎಸ್ ಸೇರ್ಪಡೆ ಫಿಕ್ಸ್; ಕಡೂರು ಅಭ್ಯರ್ಥಿಯಾಗ್ತಾರಾ ಮೇಷ್ಟ್ರು..?
ಕಡೂರು; ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್ವಿ ದತ್ತಾ ಮತ್ತೆ ಜೆಡಿಎಸ್ಗೆ ವಾಪಸಾಗೋದು ಫಿಕ್ಸ್ ಆಗಿದೆ. ನಾಳೆಯೇ ಅವರು ಜೆಡಿಎಸ್ಗೆ ಮರು ಸೇರ್ಪಡೆಯಾಗಲಿದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕಡೂರು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿದೆ. ಆದ್ರೆ ವೈಎಸ್ವಿ ದತ್ತಾ ವಾಪಸ್ಸಾದರೆ ಟಿಕೆಟ್ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕುಮಾರಸ್ವಾಮಿಯವರು ಈಗಾಗಲೇ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಬೇಸತ್ತು ವೈಎಸ್ವಿ ದತ್ತಾ ಬೆಂಬಲಗರ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುವ ತೀರ್ಮಾನ ಕೈಗೊಂಡಿದ್ದರು. ಆದ್ರೆ ಅದಾದ ನಂತರ ಅವರು ನಿನ್ನೆ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ದೇವೇಗೌಡರ ಜೊತೆ ಮಾತುಕತೆ ನಡೆಸಿದ್ದರು. ಇದೀಗ ಕಡೂರಿನಲ್ಲಿ ದತ್ತಾ ಬೆಂಬಲಿಗರ ಸಭೆಯ ನಡೆಯುತ್ತಿದೆ. ಈ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ರೇವಣ್ಣ ಕೂಡಾ ಪಲ್ಗೊಂಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಇಂದು ಬೆಳಗ್ಗೆ ಕಲಬುರಗಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ನಾಳೆ ಹಲವರು ಜೆಡಿಎಸ್ ಸೇರಲಿದ್ದಾರೆ. ನಾಳೆಯೇ ಎರಡನೇ ಪಟ್ಟಿ ರಿಲೀಸ್ ಮಾಡುತ್ತೇವೆ. ಮೊದಲ ಪಟ್ಟಿಯಲ್ಲಿನ ಕೆಲವರು ಹೆಸರು ಬದಲಾವಣೆ ಆಗಬಹುದು ಎಂದು ಸುಳಿವು ಕೊಟ್ಟಿದ್ದರು. ಈಗಿನ ಸನ್ನಿವೇಶ ನೋಡುತ್ತಿದ್ದರೆ ದತ್ತಾ ಜೆಡಿಎಸ್ಗೆ ವಾಪಸ್ಸಾಗಿ ಕಡೂರು ಟಿಕೆಟ್ ಪಡೆಯುವುದು ಪಕ್ಕಾ ಎಂದು ಹೇಳಲಾಗುತ್ತಿದೆ.