ಅಮುಲ್ ವಿಚಾರದಲ್ಲಿ ರಾಜಕೀಯ ಬೇಡ, ನಂದಿನಿಯೇ ನಂಬರ್ ವನ್; ಸಿಎಂ
ನವದೆಹಲಿ; ಅಮುಲ್ ಬ್ರಾಂಡ್ ರಾಜ್ಯಕ್ಕೆ ಆಗಮಿಸುತ್ತಿರುವ ವಿಚಾರದಲ್ಲಿ ರಾಜಕೀಯ ಮಡುವುದು ಬೇಡ. ಅಮುಲ್ ಬರುವುದರಿಂದ ನಂದಿನಿಗೆ ಯಾವುದೇ ತೊಂದರೆಯಾಗೋದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಯಾರು ಎಲ್ಲಿ ಬೇಕಾದರೂ ವ್ಯಾಪಾರ ಮಾಡಬಹುದು. ಆದ್ರೆ ಅಮುಲ್‌ನನ್ನು ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ನಮ್ಮ ನಂದಿನ ನಂಬರ್ ವನ್ ಬ್ರಾಂಡ್. ನಾವು ಕೂಡಾ ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟ ಮಾಡುತ್ತಿದ್ದೇವೆ. ಹೀಗಾಗಿ ನಮ್ಮ ರಾಜ್ಯಕ್ಕೆ ಅಮುಲ್ ಬರುವುದರಿಂದ ಯಾವುದೇ ತೊಂದರೆಯಾಗಲಾರದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.