ರಾಜ್ಯದಲ್ಲಿ ನಿಲ್ಲುತ್ತಿಲ್ಲ ಚುನಾವಣಾ ಅಕ್ರಮ; ಇದುವರೆಗೆ 23 ಕೋಟಿ ನಗದು ವಶ
ಬೆಂಗಳೂರು; ವಿಧಾನಸಭಾ ಚುನಾವಣೆ ಘೋಷಣೆಯಾದ ಮೇಲೆ ಚುನಾವಣಾ ಆಯೋಗ ಎಲ್ಲಡೆ ಹದ್ದಿನ ಕಣ್ಣಿಟ್ಟಿದೆ. ಚುನಾವಣಾ ಅಕ್ರಮಗಳು ನಡೆಯದಂತೆ ತಡೆಯಲಾಗುತ್ತಿದೆ. ಇದವರೆಗೆ ರಾಜ್ಯದ ವಿವಿಧೆಡೆ ನಡೆದ ಪರಿಶೀಲನೆ ವೇಳೆ 22.79 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ನಗದಿಗೆ ಸೂಕ್ತ ದಾಖಲೆಗಳನ್ನು ನೀಡದ ಕಾರಣ ಜಪ್ತಿ ಮಾಡಲಾಗಿದೆ.
ಇನ್ನು ಇದುವರೆಗೆ 1.52 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದ್ದ ಕಾರಣ, ವಿವಿಧ ಕಡೆ ಪರಿಶೀಲನೆ ವೇಳೆ ಈ ಮದ್ಯ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಗಾಂಜಾವನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ನಿನ್ನೆ ಒಂದೇ ದಿನ 6 ಲಕ್ಷ 52 ಸಾವಿರದ 510 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಭಾರಿ ಮೌಲ್ಯದ ಮದ್ಯ, ಡ್ರಗ್ಸ್ ಕೂಡಾ ವಕ್ಕೆ ಪಡೆಯಲಾಗಿದೆ. 5 ವೆಹಿಕಲ್ ಗಳಲ್ಲಿ 38,5000 ನಗದು ಪತ್ತೆಯಾಗಿದೆ. 3.14 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ದೆ