ಶಿಕ್ಷೆಗೆ ಮೇಲಿನ ಕೋರ್ಟ್ ತಡೆ ನೀಡಿದರೆ ರಾಹುಲ್‌ಗೆ ಮತ್ತೆ ಸ್ಥಾನ
ನವದೆಹಲಿ; ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೊಳಗಾದರೆ ಆ ಜನಪ್ರತಿನಿಧಿ ಅನರ್ಹಗೊಳ್ಳುತ್ತಾರೆ. ಶಿಕ್ಷೆ ಜಾರಿಯಾದ ತಕ್ಷಣವೇ ಆ ನಾಯಕ ಅನರ್ಹನಾಗುತ್ತಾನೆ. ಇದೇ ರಾಹುಲ್‌ಗೂ ಅನ್ವಯವಾಗಿದೆ. ಆದ್ರೆ ರಾಹುಲ್ ಮತ್ತೆ ಸಂಸತ್ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಇದಕ್ಕೆ ಕಾನೂನು ಹೋರಾಟ ಬೇಕಿದೆ.
ಸೂರತ್ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ರಾಹುಲ್ ಮೇಲಿನ ಕೋರ್ಟ್‌ಗೆ ಹೋಗೋದಕ್ಕೆ ಅವಕಾಶವಿದೆ. ಮೇಲಿನ ಕೋರ್ಟ್ ಸೂರತ್ ಕೋರ್ಟ್ ನೀಡಿರುವ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ ರಾಹುಲ್‌ಗೆ ಮತ್ತೆ ಸಂಸತ್ ಸ್ಥಾನ ಸಿಗಲಿದೆ. ಇದರ ಜೊತೆಗೆ ಅನರ್ಹಗೊಳಿಸಿರುವುದರನ್ನು ಪ್ರಶ್ನಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಕೂಡಾ ಅವಕಾಶವಿದೆ.