BengaluruPolitics

ಮತ್ತೆ ಬದಾಮಿ ಕಡೆ ಮನಸು ಮಾಡಿದ್ರಾ ಸಿದ್ದರಾಮಯ್ಯ; ನಾಳೆಯ ರೋಡ್‌ ಶೋ ಹಿಂದಿನ ರಹಸ್ಯವೇನು..?

ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರ ಗೊಂದಲದಲ್ಲಿ ಸಿಲುಕಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕೋಲಾರ ಕಷ್ಟ ಎಂದು ಹೈಕಮಾಂಡ್‌ ಹೇಳಿದ ಮೇಲೆ ಸಿದ್ದರಾಮಯ್ಯ ಅವರು ಕ್ಷೇತ್ರ ಆಯ್ಕೆ ಮಾಡೋದಕ್ಕೆ ಸರ್ಕಸ್‌ ಮಾಡ್ತಿದ್ದಾರೆ. ಸದ್ಯಕ್ಕೆ ವರುಣಾ ಕ್ಷೇತ್ರವೇ ಸೇಫ್‌ ಎಂದು ಹೇಳಲಾಗುತ್ತಿದೆ. ಆದ್ರೆ ಅಲ್ಲಿ ಹೋದರೆ ಮಗನ ಭವಿಷ್ಯ ಹಾಳಾಗುತ್ತೆ ಎಂಬುದು ಸಿದ್ದರಾಮಯ್ಯ ಅಭಿಪ್ರಾಯ. ಹೀಗಾಗಿಯೇ ಅವರು ಬದಾಮಿಯಲ್ಲೇ ಈ ಬಾರಿಯೂ ಸ್ಪರ್ಧೆ ಮಾಡೋದಕ್ಕೆ ಮನಸು ಮಾಡಿದ್ದಾರಾ ಎಂಬ ಅನುಮಾನ ಮೂಡಿದೆ.

ಬದಾಮಿ ಕ್ಷೇತ್ರ ಬೆಂಗಳೂರಿಗೆ ದೂರವಿರುವುದರಿಂದ ಹೋಗಿಬರುವುದು ಕಷ್ಟ ಎಂದು ಹೇಳಿ ಸಿದ್ದರಾಮಯ್ಯ ಅವರು ಹತ್ತಿರದ ಕ್ಷೇತ್ರ ಹುಡುಕುತ್ತಿದ್ದರು. ಆದ್ರೆ ಇದ್ದಕ್ಕಿಂತೆ ಮತ್ತೆ ಬದಾಮಿ ಕಡೆ ಮನಸು ಮಾಡಿದಂತೆ ಕಾಣುತ್ತಿದೆ. ಕ್ಷೇತ್ರ ಗೊಂದಲದ ನಡುವೆ ಅವರು ಬದಾಮಿಯಲ್ಲಿ ನಾಳೆ ರೋಡ್‌ ಶೋ ನಡೆಸುತ್ತಿದ್ದಾರೆ. ನಾಳೆ ಬದಾಮಿಯಲ್ಲಿ ಐನೂರು ಕೋಟಿ ರೂಪಾಯಿ ಮೊತ್ತದ ಕುಡಿಯುವ ನೀರಿನ ಯೋಜನೆಗೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅದಕ್ಕಾಗಿ ಬೃಹತ್‌ ರೋಡ್‌ ಹಮ್ಮಿಕೊಳ್ಳಲಾಗಿದ್ದು, ಸುಮಾರು ಎರಡು ಕಿಲೋ ಮೀಟರ್‌ ದೂರ ಸಿದ್ದರಾಮಯ್ಯ ರೋಡ್‌ ಶೋ ಮಾಡಲಿದ್ದಾರೆ. ಇದರಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಜನಬೆಂಬಲ ನೋಡಿಕೊಂಡು ಸಿದ್ದರಾಮಯ್ಯ ಅವರು ಬದಾಮಿಯಲ್ಲಿ ನಿಲ್ಲಬೇಕಾ ಬೇಡವಾ ಎಂಬುದರ ಬಗ್ಗೆ ನಿರ್ಧಾ ಮಾಡ್ತಾರೆ ಎಂದು ಹೇಳಲಾಗುತ್ತಿದೆ.

ಇನ್ನು ಸಿದ್ದರಾಮಯ್ಯ ಅವರು ವರುಣಾ ಹಾಗೂ ಬದಾಮಿ ಎರಡೂ ಕ್ಷೇತ್ರದಲ್ಲೂ ಸ್ಪರ್ಧೆ ಮಾಡೋಕೆ ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರ ಈ ಆಸೆಯ ಬಗ್ಗೆ ಕೆ.ಜೆ.ಜಾರ್ಜ್‌ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದ್ರೆ ಎರಡು ಕ್ಷೇತ್ರದಲ್ಲಿ ಟಿಕೆಟ್‌ ನೀಡುವ ಬಗ್ಗೆ ಸುರ್ಜೇವಾಲಾ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.

Share Post