ವಿಕೆಟ್ ಕೀಪಿಂಗ್ ಮಾಡಿದ ಬೀದಿನಾಯಿ: ಸಚಿನ್ ಫುಲ್ ಫಿದಾ..!
ವಿಕೆಟ್ ಕೀಪಿಂಗ್ ಅಂದ್ರೆ ಸದ್ಯಕ್ಕೆ ನಮಗೆ ನೆನಪಾಗೋದು ಮಹೇಂದ್ರ ಸಿಂಗ್ ಧೋನಿ. ಆದ್ರೆ, ಮಾಸ್ಟರ್ ಬ್ಲಾಸ್ಟರ್ ಸಿಚಿನ ತೆಂಡೂಲ್ಕರ್ಗೆ ಧೋನಿಗಿಂತ ಮತ್ತೊಬ್ಬರ ವಿಕೆಟ್ ಕೀಪಿಂಗ್ ಸಖತ್ ಇಷ್ಟವಾಗಿದೆ. ಅದಕ್ಕಾಗಿಯೇ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಆದರೆ ಇಲ್ಲಿ ವಿಕೆಟ್ ಕೀಪಿಂಗ್ ಮಾಡಿರೋದು ಕ್ರಿಕೆಟರ್ ಅಲ್ಲವೇ ಅಲ್ಲ. ಮನುಷ್ಯರಂತೂ ಮೊದಲೇ ಅಲ್ಲ. ಇಲ್ಲಿ ಕೀಪಿಂಗ್ ಮಾಡಿರೋದು ನಾಯಿ. ಆಶ್ಚರ್ಯ ಆದರೂ ಇದನ್ನು ನೀವು ನಂಬಲೇಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಬೀದಿ ನಾಯಿಯೊಂದು ವಿಕೆಟ್ ಕೀಪಿಂಗ್ ಮಾಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಆ ವಿಡಿಯೋ ನೋಡಿ ಸಚಿವ ತೆಂಡೂಲ್ಕರ್ ಕೂಡಾ ಅಚ್ಚರಿಯಾಗಿದ್ದಾರೆ. ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಸ್ತೆಯೊಂದರಲ್ಲಿ ಕೋಲುಗಳಿಂದ ಮಾಡಿದ ಸ್ಟಂಪ್ಗಳ ಮುಂದೆ ಮಕ್ಕಳು ಕ್ರಿಕೆಟ್ ಆಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಅಲ್ಲಿ ಒಂದು ನಾಯಿಯೂ ಇದೆ. ಎರಡು ಮಕ್ಕಳೊಂದಿಗೆ ಶ್ವಾನ ಕ್ರಿಕೆಟ್ ಆಡುವ ದೃಶ್ಯ ಇದು. ಬಾಲಕನೊಬ್ಬ ಬೌಲ್ ಮಾಡಲು ಸಜ್ಜಾಗುವಾಗಲೇ ಮುದ್ದು ಶ್ವಾನವೊಂದು ಓಡೋಡಿ ಬಂದು ವಿಕೆಟ್ ಹಿಂದೆ ನಿಲ್ಲುತ್ತದೆ. ಜತೆಗೆ, ಬರುವ ಚೆಂಡನ್ನು ಬಾಯಲ್ಲಿ ಕಚ್ಚಿ ಮತ್ತೆ ಅದೇ ಬಾಲಕನ ಬಳಿಗೆ ಹೋಗಿ ಕೊಡುತ್ತದೆ. ಇದು 1.17 ನಿಮಿಷದ ವಿಡಿಯೋ ಆಗಿದ್ದು, ಸಚಿನ್ ಅವರು ಶೇರ್ ಮಾಡುತ್ತಿದಂತೆ ಲಕ್ಷಾಂತರ ಮಂದಿ ನಾಯಿಯ ಆಟವನ್ನು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.