BengaluruPolitics

135 ಕ್ಷೇತ್ರಗಳ ಕೈ ಅಭ್ಯರ್ಥಿ ಪಟ್ಟಿ ರೆಡಿ; ಯಾರೆಲ್ಲಾ ಇದ್ದಾರೆ ಪಟ್ಟಿಯಲ್ಲಿ..?

ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಕಾಂಗ್ರೆಸ್‌ ಮೊದಲ ಪಟ್ಟಿ ರಿಲೀಸ್‌ ಮಾಡೋದಕ್ಕೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಮೂರು ದಿನಗಳ ಕಾಲ ಸಭೆ ನಡೆಸಲಾಗಿತ್ತು. ನಾಳೆ ದೆಹಲಿಯಲ್ಲಿ ಅಂತಿಮ ಮೀಟಿಂಗ್‌ ನಡೆಯಲಿದ್ದು, 135 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಾಳೆಯೇ 135 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡುವ ಸಾಧ್ಯತೆ ಇದೆ. ತಪ್ಪಿದರೆ ಮಾರ್ಚ್‌ 19ರಂದು ಮೊದಲ ಪಟ್ಟಿ ಘೋಷಣೆಯಾಗಲಿದೆ.

ಈಗಾಗಲೇ ಮೊದಲ ಪಟ್ಟಿ ಸಿದ್ಧವಾಗಿದೆ. ಇದರಲ್ಲಿ 66 ಕ್ಷೇತ್ರಗಳಲ್ಲಿ ಯಾವುದೇ ಗೊಂದಲವಿಲ್ಲ. ಹೀಗಾಗಿ ಈ ಕ್ಷೇತ್ರಗಳಲ್ಲಿ ಕೇವಲ ಒಬ್ಬರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಇನ್ನು 89 ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಇದ್ದು, ಈ ಕ್ಷೇತ್ರಗಳಿಗೆ ತಲಾ ಇಬ್ಬರ ಹೆಸರುಗಳನ್ನು ಸೂಚಿಸಲಾಗಿದೆ. ಹೈಕಮಾಂಡ್‌ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಹಾಲಿ ಶಾಸಕರಿರುವ ನಾಲ್ಕು ಕ್ಷೇತ್ರಗಳಲ್ಲಿ ಇಬ್ಬರ ಹೆಸರುಗಳನ್ನು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಬಲ್ಲ ಮೂಲಗಳ ಪ್ರಕಾರ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ..?

ರಾಮನಗರ – ಇಕ್ಬಾಲ್‌ ಹುಸೇನ್‌
ಸೊರಬ – ಮಧು ಬಂಗಾರಪ್ಪ
ಕಡೂರು – ವೈಎಸ್‌ವಿ ದತ್ತಾ
ರಾಜಾಜಿನಗರ – ಪುಟ್ಟಣ್ಣ
ಕೋಲಾರ – ಸಿದ್ದರಾಮಯ್ಯ
ಬಸವನಗುಡಿ – ಯು.ಬಿ.ವೆಂಕಟೇಶ್‌
ಕಾರವಾರ – ಸತೀಶ್‌ ಶೈಲ್‌
ಭಟ್ಕಳ – ಮಂಕಾಳ ವೈದ್ಯ
ಹಿರೇಕೆರೂರು – ಯು.ಬಿ.ಬಣಕಾರ್‌
ಚಿಕ್ಕಬಳ್ಳಾಪುರ – ಕೊತ್ತೂರು ಮಂಜು
ಚಿಂತಾಮಣಿ – ಡಾ.ಎಂ.ಸಿ.ಸುಧಾಕರ್‌
ಮಾಗಡಿ – ಬಾಲಕೃಷ್ಣ
ವಿರಾಜಪೇಟೆ – ಪೊನ್ನಪ್ಪ
ಹೊಸಕೋಟೆ – ಶರತ್‌
ಟಿ.ನರಸೀಪುರ – ಸುನಿಲ್‌ ಬೋಸ್‌
ನಿಪ್ಪಾಣಿ – ಕಾಕಾಸಾಹೇಬ್‌ ಪಾಟೀಲ್‌
ಹುಕ್ಕೇರಿ – ಎಂ.ಬಿ.ಪಾಟೀಲ್‌
ಹಿರಿಯೂರು – ಸುಧಾಕರ್‌
ಕನಕಗಿರಿ – ಶಿವರಾಜ್‌ ತಂಗಡಗಿ

ಹುನಗುಂದ- ವಿಜಯಾನಂದ ಕಾಶಪ್ಪನವರ್‌

ನಂಜನಗೂಡು- ದರ್ಶನ್‌, ಹೆಚ್‌.ಸಿ.ಮಹದೇವಪ್ಪ

ದೊಡ್ಡಬಳ್ಳಾಪುರ – ವೆಂಕಟರಮಣಯ್ಯ, ಬಿ.ಸಿ.ಆನಂದ್‌

ಪಾವಗಡ – ವೆಂಕಟರಮಣಪ್ಪ, ಹೆಚ್‌.ವಿ.ವೆಂಕಟೇಶ್‌

ಮಂಗಳೂರು ದಕ್ಷಿಣ; ಐವಾನ್‌ ಡಿಸೋಜಾ, ಲೋಬೋ

ಕಲಘಟಗಿ – ಸಂತೋಷ್‌ ಲಾಡ್‌, ನಾಗರಾಜ್‌ ಚಬ್ಬಿ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್‌, ಆರ್‌.ಎಂ.ಮಂಜುನಾಥ್‌ ಗೌಡ
ಬಳ್ಳಾರಿ ನಗರ – ಅಲ್ಲಂ ಪ್ರಶಾಂತ್‌, ಅನಿಲ್‌ ಲಾಡ್‌
ಗಂಗಾವತಿ – ಇಕ್ಬಾಲ್‌ ಅನ್ಸಾರಿ, ಹೆಚ್‌.ಆರ್‌.ಶ್ರೀನಾಥ್

Share Post