BengaluruHealth

ಹೆಚ್3ಎನ್2 ಸೋಂಕಿಗೆ ಇಬ್ಬರು ಬಲಿ; ರಾಜ್ಯದಲ್ಲೂ ಒಬ್ಬರ ಸಾವು

ನವದೆಹಲಿ; ಹೆಚ್3ಎನ್2 ಭೀತಿ ಹುಟ್ಟಿಸುತ್ತಿದೆ. ರಾಜ್ಯ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಸೋಂಕು ಹರಡುತ್ತಲೇ ಇದೆ. ಹೆಚ್3ಎನ್2 ಸೋಂಕಿಗೆ ದೇಶದಲ್ಲಿ ಎರಡು ಸಾವುಗಳಾಗಿವೆ. ಹಾಸನದಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಹರಿಯಾಣದಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ.

ದೇಶಾದ್ಯಂತ ಸುಮಾರು 90 ಮಂದಿಗೆ ಹೆಚ್3ಎನ್2 ಸೋಂಕು ತಗುಲಿದೆ. ಇನ್ನು 8 ಮಂದಿಗೆ ಹೆಚ್1ಎನ್1 ವೈರಸ್‌ ವಕ್ಕರಿಸಿದೆ. ಈ ಎರಡೂ ವೈರಸ್‌ಗಳೂ ಕೊವಿಡ್‌ನಂತೆಯೇ ಗುಣಲಕ್ಷಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ. ಹೆಚ್3ಎನ್2 ಸೋಂಕು ತಗುಲಿದರೆ, ನಿರಂತರ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆ ಹಾಗೂ ಉಬ್ಬಸದ ಲಕ್ಷಣಗಳು ಕಂಡುಬರುತ್ತವೆ.

Share Post