CrimeDistricts

ಮಹಿಳೆ ವಿಚಾರಕ್ಕೆ ಮಾಜಿ ಶಾಸಕನ ಸಹೋದರ ಜೊತೆ ಜಗಳ

ಮಂಡ್ಯ; ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಸಹೋದರ ಕೆ.ಬಿ.ರವಿಕುಮಾರ್ ಮಹಿಳೆಯೊಬ್ಬರ ಜೊತೆ ಟವಲ್‌, ಬನಿಯನ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಕೆಆರ್ ಪೇಟೆಯ ಮಹಿಳೆಯೊಂದಿಗೆ ಕೆ.ಬಿ.ರವಿ ಟವಲ್ ಹಾಗೂ ಬನಿಯನ್‍ನಲ್ಲಿ ಸಿಕ್ಕಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮಂಡ್ಯದಲ್ಲಿ ರವಿಯವರ ವಾಣಿಜ್ಯ ಕಟ್ಟಡದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಾರೆ. ನಿನ್ನೆ ಆ ಮಹಿಳೆ ಮನೆಗೆ ಬಂದಿಲ್ಲ. ಹೀಗಾಗಿ ಆಕೆಯ ಗಂಡ, ರವಿಯವರ ಮನೆ ಬಳಿ ಬಂದಿದ್ದಾರೆ. ಈ ವೇಳೆ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದಾಕೆ ಸ್ಕೂಟರ್‌ ಅಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಆಕೆ ಪತ್ತೆಯಾಗಿದ್ದು, ಗಂಡ ವಿಚಾರಿಸಿದಾಗ ನನಗೆ ನೀನು ಬೇಡ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದಿದ್ದಾಳಂತೆ. ಹೀಗಾಗಿ ಗಂಡ ಪೊಲೀಸರನ್ನು ಕರೆಸಿ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.

Share Post