CrimeDistricts

ತೋಟದ ಮಾಲೀಕಳ ಮೇಲೆ ಕಾರ್ಮಿಕನಿಂದ ಅತ್ಯಾಚಾರ ಯತ್ನ

ಮಡಿಕೇರಿ; ಕಾಫಿ ಎಸ್ಟೇಟ್ ಮಾಲೀಕಳ ಮೇಲೆ ಕಾರ್ಮಿಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಸ್ಸಾಂ ಮೂಲದ ರಾಜೀವ್‌ ಎಂಬಾತನೇ ಅತ್ಯಾಚಾರಕ್ಕೆ ಯತ್ನಿಸಿದವನು. ಕೊಡಗು ಜಿಲ್ಲೆ ಮೊನ್ನಂಪೇಟೆ ಬಳಿ ಈ ಘಟನೆ ನಡೆದಿದೆ.

ಕಾಫಿ ಎಸ್ಟೇಟ್‌ನಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಆತ ತೋಟದ ಮಾಲೀಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದನ್ನು ವಿರೋಧಿಸಿದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಮೇಲೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Share Post