ಸಾರ್ವಜನಿಕ ರಸ್ತೆಗೆ ಕಲ್ಲು-ಮುಳ್ಳು; ಗಂಟೆಗಟ್ಟಲೆ ಪರದಾಡಿದ ಜನ
ಕನಕಪುರ; ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ಖಾಲಿ ಜಾಗ ಸಿಕ್ತು ಅಂದ್ರೆ ಅಲ್ಲಿ ಬೇಲಿ ಹಾಕಿಬಿಡುತ್ತಾರೆ. ಆದ್ರೆ ಇಲ್ಲೊಬ್ಬರು ಜನ, ವಾಃನ ಓಡಾಡುವ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾನೆ. ರಸ್ತೆ ನನ್ನದು ಎಂದು ವಾದ ಮಾಡಿರುವ ವ್ಯಕ್ತಿ ಟಾರ್ ರಸ್ತೆಗೆ ಮುಳ್ಳು-ಕಲ್ಲು ಹಾಕಿ ವಾಹನಗಳನ್ನು ಓಡಾಡದಂತೆ ಅಡ್ಡಿಪಡಿಸಿದ್ದಾನೆ. ಕನಕಪುರ ತಾಲ್ಲೂಕಿನ ಮತ್ತಿಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಜಾಗ ನನಗೆ ಸೇರಿದ್ದ. ನನ್ನ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ನಾನು ಇಲ್ಲಿ ವಾಹನಗಳನ್ನು ಓಡಾಡೋದಕ್ಕೆ ಬಿಡೋದಿಲ್ಲ ಅಂತ ಆತ ವಾದಿಸಿದ್ದಾನೆ. ಆತನ ಹೆಸ್ರು ವೆಂಕಟೇಶ್. ವೆಂಕಟೇಶ್ ಮಾಡಿದ ತೊಂದರೆಯಿಂದ ಸರ್ಕಾರಿ ಬಸ್‌ಗಳು, ವಾಹನಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂತು.
ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕನಕಪುರ ಗ್ರಾಮಾಂತರ ಪೊಲೀಸರು, ರಸ್ತೆಯಲ್ಲಿ ಹಾಕಿದ್ದ ಕಲ್ಲು, ಮುಳ್ಳು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ವೆಂಕಟೇಶ್ ಅವರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ.