ವಿದ್ಯುತ್ ಸಂಪರ್ಕಕ್ಕೆ ಲಂಚ; ಬೆಸ್ಕಾಂ ಅಧಿಕಾರಿ ಬಲೆಗೆ
ದಾವಣಗೆರೆ; ಐಪಿ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕಕ್ಕಾಗಿ ಅನುಮೋದನೆ ಪಡೆಯಲು ವ್ಯಕ್ತಿಯೊಬ್ಬರು ಮನವಿ ಮಾಡಿದ್ದು, ಅದಕ್ಕಾಗಿ ಐದು ಸಾವಿರ ರೂಪಾಯಿ ಲಂಚ ಕೇಳಿದ್ದ ಬೆಸ್ಕಾಂ ಸಹಾಯಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುತ್ತಿದ್ದ ವೇಳೆಯೇ ದಾಳಿ ನಡೆಸಿದ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಹರಿಹರ ನಗರದ ಬೆಸ್ಕಾಂ ಕಚೇರಿಯಲ್ಲಿ ಈ ದಾಳಿ ನಡೆಸಲಾಗಿದೆ.
ಹರಿಹರ ನಗರ ಬೆಸ್ಕಾಂ ಕಚೇರಿಯ ಸಹಾಯಕ ಅಭಿಯಂತರ ಬಿ.ಎಂ. ಕರಿಬಸಯ್ಯ ಸಿಕ್ಕಿಬಿದ್ದ ಅಧಿಕಾರಿ. ಮಹೇಶ್ವರಪ್ಪ ಬೇವಿನಹಳ್ಳಿ ಎಂಬುವವರು ಐಪಿ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅನುಮೋದನೆ ಕೋರಿದ್ದರು. ಪ್ರತಿ ಸಂಪರ್ಕಕ್ಕೆ ಮುಂಚೆಯೇ ಪ್ರತಿ ಸಂಪರ್ಕಕ್ಕೆ 5 ಸಾವಿರ ರೂ.ಗಳ ಲಂಚ ನೀಡುವಂತೆ ಒತ್ತಾಯಿಸಿದ್ದರು. ಅಂತಿಮವಾಗಿ ಒಂದು ಸಂಪರ್ಕಕ್ಕೆ ಒಂದು ಸಾವಿರ ರೂಪಾಯಿಗೆ ಫೈನಲ್ ಮಾಡಲಾಗಿತ್ತು. ಈ ವಿಚಾರವನ್ನು ಮಹೇಶ್ವರಪ್ಪ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು.