BengaluruCrime

ಭಿಕ್ಷಾಟನೆ ಮಾಡ್ತಿದ್ದ ಕಡೆ ಇಂದು ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು; ನಗರದಾದ್ಯಂತ ಬಿಕ್ಷಾಟನೆ ಮಾಡ್ತಿದ್ದ ಕಡೆ ಇಂದು ಸಿಸಿಬಿ ಪೊಲೀಸರ ದಾಳಿನಡೆಸಿದ್ದಾರೆ. 14 ತಂಡಗಳನ್ನ ರಚಿಸಿ ಹಾಲವೆಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಚೈಲ್ಡ್ ಲೈನ್ ತಂಡ ಹಾಗೂ ನೋಡೆಲ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಮಕ್ಕಳು, ಹುಡುಗಿಯರು, ಹುಡುಗರು, ಮಹಿಳೆಯರು ಸೇರಿ‌ 55 ಜನರ ರಕ್ಷಣೆ ಮಾಡಲಾಗಿದೆ. ಕೆಲ ಮಹಿಳೆಯರನ್ನ ಬಾಡಿಗೆ ಹಾಗೂ ಕಳ್ಳಸಾಗಾಣಿಕೆ ಮೂಲಕ ತಂದು ಬಿಕ್ಷಾಟನೆ ಮಾಡಿಸ್ತಿದ್ದ ಶಂಕೆ ಇದೆ ಅಲ್ಲದೆ, ಮಕ್ಕಳಿಗೆ ನಿದ್ದೆ ಬರೋ ಔಷಧಿ ನೀಡಿ ಬಿಕ್ಷಾಟನೆಗೆ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗುತ್ತಿದೆ. ಸದ್ಯ ಅಷ್ಟೂ ಜನರನ್ನ ರಕ್ಷಣೆ ಮಾಡಿರೋ ಸಿಸಿಬಿ, ಮಕ್ಕಳನ್ನ ಸಿಡಬ್ಲೂಸಿ ಹಾಗೂ ಮಹಿಳೆಯರನ್ನು ಸಾಂತ್ವಾನ ಕೇಂದ್ರಗಳಿಗೆ ಒಪ್ಪಿಸಲಾಗಿದೆ.

Share Post