CrimeDistricts

ಪತ್ನಿ ಸೇರಿ ಇಬ್ಬರು ಮಕ್ಕಳನ್ನ ಸಜೀವವಾಗಿ ಸುಟ್ಟುಹಾಕಿದ ಪಾಪಿ

ಚಿಕ್ಕಬಳ್ಳಾಪುರ; ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟುಹಾಕಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾನೆ.

ಪತ್ನಿ ಶೀಲ ಶಂಕಿಸಿರುವ ಪತಿ ಇಂತಹ ದುಷ್ಕೃತ್ಯವೆಸಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಹೆಣ್ಣೂರು ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಗ್ರಾಮದ ಸೊಣ್ಣಪ್ಪ(50) ಕೃತ್ಯವೆಸಗಿದ ಪಾಪಿ, ಈತನ ಪತ್ನಿ ನೇತ್ರಾ (40) ಮಕ್ಕಳು ಸ್ನೇಹಾ(09) ಹಾಗೂ ವರ್ಷಿತಾ (12) ಮೃತರು.

ಪತ್ನಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆ ಎಂದು ಕಳೆದ ರಾತ್ರಿ ಪತ್ನಿ ಹಾಗೂ ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದಿದ್ದಾನೆ ಬಳಿಕ ತಾನು‌ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಸದ್ಯ ಸೊಣ್ಣಪ್ಪ ಜೀವನ್ಮರಣದ ಮದ್ಯೆ ಹೋರಾಟ ನಡೆಸುತ್ತಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share Post