ರಾಜ್ಯ ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕಿದ್ದೇನು..?
2023-24 ನೇ ರಾಜ್ಯ ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಅದ್ರಲ್ಲಿ ವಿದ್ಯಾರ್ಥಿನಿಯರಿಗೆ ಉಚತ ಬಸ್ ಪಾಸ್ ವ್ಯವಸ್ಥೆ ಘೋಷಿಸಲಾಗಿದೆ.
9556 ಶಾಲಾ ಕೊಠಡಿಗಳ ನಿರ್ಮಾಣ
30 ಕಸ್ತೂರ್ ಬಾ ಗಾಂಧಿ ಶಾಲೆಗಳಲ್ಲಿ ಹೈಟೆಕ್ ವ್ಯವಸ್ಥೆ
73 ಕರ್ನಾಟಕ ಪಬ್ಲಿಕ್ ಶಾಲೆ, 50 ಆದರ್ಶ ಶಾಲೆಗಳ ಸ್ಥಾಪನೆ
47 ವಸತಿ ಶಾಲೆಗಳ ದುರಸ್ತಿ ಹಾಗೂ ಅಲ್ಲಿ ಸ್ಮಾರ್ಟ್ ಕ್ಲಾಸ್ಗಳ ನಿರ್ಮಾಣ
3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂಪಾಯಿ ಅನುದಾನ
24 ಸಾವಿರ ಶಾಲೆಗಳಲ್ಲಿ ರೀಡಿಂಗ್ ಕಾರ್ನರ್ ನಿರ್ಮಾಣ
ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ
ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಮಕ್ಕಳ ಬಸ್ ಯೋಜನೆ
100 ಕೋಟಿ ವೆಚ್ಚದಲ್ಲಿ ಮಕ್ಕಳ ಬಸ್ ಯೋಜನೆ ಅನುಷ್ಠಾನ
ಪ್ರೌಢ ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿ
ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ
8 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯ ಲಾಭ