LIVE UPDATES: ಕರ್ನಾಟಕ ಬಜೆಟ್ ಮಂಡಿಸುತ್ತಿರುವ ಸಿಎಂ
ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎರಡನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ೨೦೨೩-೨೪ನೇ ಸಾಲಿನ ಬಜೆಟ್‌ನ ವಿವರಗಳು ಈ ಕೆಳಗಿನಂತಿವೆ.
- 75 ಕರ್ನಾಟಕ ಪಬ್ಲಿಕ್ ಶಾಲೆ, 25 ಆದರ್ಶ ಶಾಲೆಗಳ ಸ್ಥಾಪನೆ
- 47 ವಸತಿ ಶಾಲೆಗಳ ದುರಸ್ತಿ ಹಾಗೂ ಅಲ್ಲಿ ಸ್ಮಾರ್ಟ್ ಕ್ಲಾಸ್‌ಗಳ ನಿರ್ಮಾಣ
- ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆಗೆ ಮಾಸ್ಟರ್ ಪ್ಲ್ಯಾನ್
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಸಿಗ್ನಲ್‌ಗಳು ನಿರ್ವಹಣೆ
- 150 ಕೋಟಿ ರೂಪಾಯಿ ವೆಚ್ಚದಲ್ಲಿ 75 ಜಂಕ್ಷನ್‌ಗಳ ಅಭಿವೃದ್ಧಿ
- ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ 150 ಕೋಟಿ ರೂಪಾಯಿ
- ಕುಡಿಯುವ ನೀರಿನ ಯೋಜನೆಗೆ 11200 ಕೋಟಿ ರೂಪಾಯಿ ಮೀಸಲು
- ವೈಟ್ ಟಾಪಿಂಗ್‌ಗೆ ೧ ಸಾವಿರ ಕೋಟಿ ರೂಪಾಯಿ ಮೀಸಲು
- ರಾಯಚೂರಿನಲ್ಲಿ ಕೆರೆ ತುಂಬಿಸೋ ಯೋಜನೆಗೆ ಅನುದಾನ
- ಸೃಷ್ಟಿ ಟಿಂಕರಿಂಗ್ ಪ್ರಯೋಗಾಲಯ ನಿರ್ಮಾಣ
- 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಹೆಚ್ಚಳದ ಗುರಿ
- ೧೮೦ ಕೋಟಿ ರೂಪಾಯಿ ವೆಚ್ಚದಲ್ಲಿ ಜೀವನ್ ಜ್ಯೋತಿ ಯೋಜನೆ ಜಾರಿ
- ೨೪ ಸಾವಿರ ಶಾಲೆಗಳಲ್ಲಿ ರೀಡಿಂಗ್ ಕಾರ್ನರ್ ನಿರ್ಮಾಣ
- ನರೇಗಾ ಯೋಜನೆಗೆ 1 ಸಾವಿರ ಕೋಟಿ ರೂಪಾಯಿ ಮೀಸಲು
- ಉಚಿತ ಉನ್ನತ ಶಿಕ್ಷಣ ಯೋಜನೆ ಜಾರಿ
- ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ
- ಆಟೋ ಚಾಲಕರು ಹಾಗೂ ಕಾರು ಚಾಲಕರಿಗೆ ಬಂಪರ್ ಗಿಫ್ಟ್
- 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂಪಾಯಿ ಅನುದಾನ
- ನೇಕಾರರು, ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ
- ಬದುಕುವ ದಾರಿ ಯೋಜನೆಯಡಿ ಹೊಸ ಐಟಿಐ ಕೋರ್ಸ್
- ಬೆಂಗಳೂರಿನಲ್ಲಿ ಬದುಕುವ ದಾರಿ ಹೊಸ ಯೋಜನೆ ಜಾರಿ
- ರಾಮನಗರದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ
- ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ
- ಬಳ್ಳಾರಿ ಮೆಗಾ ಡೇರಿಗೆ ನೂರು ಕೋಟಿ ರೂ. ಅನುದಾನ
- ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ
- ಬೆಂಗಳೂರು ನಗರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ರೂಪಾಯಿ
- ಪ್ರತಿ ಗ್ರಾಮ ಪಂಚಾಯತ್‌ಗೆ 60 ಲಕ್ಷ ರೂಪಾಯಿ ಅನುದಾನ
- ನೆಲೆ ಹೆಸರಲ್ಲಿ ಹತ್ತು ಸಾವಿರ ಸೈಟ್ ವಿತರಿಸಲು ಕ್ರಮ
- ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ
- ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ
- ಕರಾವಳಿ ಜಿಲ್ಲೆಗಳಲ್ಲಿ ಪಿಎಂ ಮತ್ಸ್ಯ ಸಂಪದ ಯೋಜನೆ
- ಮೀನು ರಫ್ತಿಗೆ ಬೈಂದೂರಿನಲ್ಲಿ ಸೀಫುಡ್ ಪಾರ್ಕ್
- ಮಹಿಳಾ ಕಾರ್ಮಿಕರಿಗೆ 500 ರೂಪಾಯಿ ಸಹಾಯಧನ – ಗೃಹಿಣಿ ಶಕ್ತಿ ಯೋಜನೆ
- ದೋಣಿಗಳಿಗೆ ಮೋಟಾರ್ ಎಂಜಿನ್ ಅಳವಡಿಕೆ
- ವಸತಿ ರಹಿತ ಮೀನುಗಾರರಿಗೆ ವಿಶೇಷ ಸೌಲಭ್ಯ
- 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಸಾಲ
- ರೈತರಿಗೆ 5 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ
- ಬಿಜೆಪಿ ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿದೆ
- ಬಜೆಟ್ ಮಂಡನೆಗೂ ಮುನ್ನ ವಿಪಕ್ಷಗಳಿಗೆ ಬೊಮ್ಮಾಯಿ ಟಾಂಗ್
- ಕಾಂಗ್ರೆಸ್ ಜನರ ಕಿವಿಗೆ ಹೂ ಇಟ್ಟಿದೆ
- ಕುವೆಂಪು ಕವನದ ಸಾಲು ಓದುತ್ತಾ ಬಜೆಟ್ ಶುರು ಮಾಡಿದ ಸಿಎಂ
- ಇಷ್ಟು ದಿನ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜನರ ಕಿವಿಗೆ ಹೂ ಇಡುತ್ತಿದ್ದರು
- ಈಗ ಜನರೇ ಅವರ ಮೇಲೆ ಹೂ ಇಡುತ್ತಿದ್ದಾರೆ
- ಸಿಎಂ ಬೊಮ್ಮಾಯಿಗೆ ಗರಂ ಆದ ವಿಪಕ್ಷಗಳ ನಾಯಕರು