CrimeInternational

ಬಂದೂಕುದಾರಿಯಿಂದ ಗುಂಡಿನ ದಾಳಿ; ಮೂವರ ದುರ್ಮರಣ

ಮಿಚಿಗನ್; ಅಮೆರಿಕದಲ್ಲಿ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದ್ದು, ಮೂವರು ಹತರಾಗಿದ್ದಾರೆ. ಈಸ್ಟ್‌ ಲ್ಯಾನ್ಸಿಂಗ್‌ನ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದೆ. ಎರಡು ಕಡೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿ ಹಲವು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಬರ್ಕಿ ಹಾಲ್‌ನಲ್ಲಿ ಮೊದಲ ಗುಂಡಿನ ದಾಳಿ ನಡೆದಿದ್ದು, ಎರಡನೇ ಗುಂಡಿನ ದಾಳಿ ಎಂಎಸ್‌ಯು ವಿದ್ಯಾರ್ಥಿ ಒಕ್ಕೂಟ ಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿ ದಾಳಿಗೂ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಜೊತೆಗೆ ಪೊಲೀಸ್‌ ಭದ್ರತೆ ಕೂಡಾ ಏರ್ಪಡಿಸಲಾಗಿತ್ತು. ಈ ನಡುವೆಯೂ ದಾಳಿ ನಡೆದಿದೆ.

ಆರೋಪಿ ಗುಂಡಿನ ದಾಳಿ ನಡೆಸಿದ ನಂತರ ಪರಾರಿಯಾಗಿದ್ದಾನೆ. ಆರೋಪಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share Post