ಕಗ್ಗತ್ತಲಲ್ಲಿ ಮುಳುಗಿದ ಇತಿಹಾಸ ಪ್ರಸಿದ್ಧ ಬೌರಿಂಗ್ ಆಸ್ಪತ್ರೆ
ಬೆಂಗಳೂರು; ಸರ್ಕಾರ ಹಾಗೂ ಇಲಾಖೆ ಬೇಜವಬ್ದಾರಿಗೆ ಬೇಸತ್ತ ಬಡ ರೋಗಿಗಳು ಕರೆಂಟ್ ಇಲ್ಲದೇ ಕಳೆದ ಎರಡು ದಿನದಿಂದ ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ. ಶಿವಾಜಿನಗರದ ಬ್ರಿಟಿಷರ್ ಕಾಲದ ಲೇಡಿ ಕರ್ಜನ್ ರಸ್ತೆಯ ಬೌರಿಂಗ್ ಆಸ್ಪತ್ರೆ ಕಗ್ಗತ್ತಲ್ಲಲಿ ಮುಳುಗಿದೆ.
ನಿತ್ಯ ಸಾವಿರಾರು ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ಹತ್ತಾರು ಗರ್ಭಿಣಿಯರು ಹೆರಿಗೆಗಾಗಿ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ. ಅದರೆ ಈ ಆಸ್ಪತ್ರೆಯಲ್ಲಿ ಕರೆಂಟ್ ನದ್ದೆ ಸಮಸ್ಯೆ. ಈ ಹಿನ್ನಲೆ ನಿನ್ನೆ ಹೆರಿಯಾದ ತಾಯಿ ಮಗುವನ್ನ ವಾಣಿ ವಿಕಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಆಸ್ಪತ್ರೆ ಮುಂಭಾಗ ವೈಯರ್ ಕಟ್ ಆಗಿದೆ ಇದುವರೆಗು ಯಾರೊಬ್ಬರು ಈ ಬಗ್ಗೆ ಗಮನ ಹರಿಸುತಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.