Districts

ರಾಜ್ಯದಲ್ಲೇ ರಚನೆಯಾಗಲಿದೆ ಮೊದಲ ಚಿರತೆ ಕಾರ್ಯಪಡೆ

ಮೈಸೂರು; ಚಿರತೆ ಹಾವಳಿ ತಪ್ಪಿಸಲು ಚಿರೆತೆ ಕಾರ್ಯಪಡೆ ರಚನೆ ಮಾಡಬೇಕೆಂದು ಸಿಎಂ ಬೊಮ್ಮಾಯಿ ಆದೇಶದ ನೀಡಿದ್ದರು.ಅದರಂತೆ ಮೈಸೂರಿನಲ್ಲಿ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ಸಿದ್ದತೆ ನಡೆದಿದೆ.ಇದು ರಾಜ್ಯದಲ್ಲೇ ರಚನೆಯಾಗಿರು ಮೊದಲ ಚಿರತೆ ಕಾರ್ಯಪಡೆ ಯಾಗಿದೆ.

ಮೈಸೂರು ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ ಕೋಟೆ, ಸರಗೂರು,ತಿ.ನರಸಿಪುರ, ಮಂಡ್ಯ ಸೇರಿದಂತೆ ಹಲವೆಡೆ ಚಿರತೆ ಹಾವಳಿ ಹೆಚ್ಚಾಗಿದೆ, ಚಿರತೆ ಕಾರ್ಯಪಡೆಯಲ್ಲಿ ನಾಲ್ಕು ತಂಡಗಳಿದ್ದು,58 ಸಿಬ್ಬಂದಿಗಳಿರುತ್ತಾರೆ ಹಾಗೂ ಟಾಸ್ಕ್ ಫೋರ್ಸ್ ಗೆ ಡಿಸಿಎಫ್ ಮುಖ್ಯಸ್ಥರಾಗಿರುತ್ತಾರೆ.

ನಿಯಂತ್ರಣ ಕೊಠಡಿಯನ್ನ ಅರಣ್ಯ ಭವನದಲ್ಲಿ ಮಾಡಲಾಗುವುದು.ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ.ಓರ್ವ ಎಸಿಎಫ್, ಓರ್ವ ವಲಯಾಧಿಕಾರಿ,ನಾಲ್ವರು ಉಪವಲಯಾಧಿಕಾರಿಗಳು,8 ಮಂದಿ ಗಸ್ತು ಅರಣ್ಯ ಪಾಲಕರು,ಹೊರಗುತ್ತಿಯಡಿ 40 ಮಂದಿ ಕಾರ್ಯಪಡೆ ಸಹಾಯಕರು,ಹೊರಗುತ್ತಿಗೆಯಡಿ ಐವರು ವಾಹನ ಚಾಲಕರು ಸೇರಿದಂತೆ 58 ಮಂದಿ ಕಾರ್ಯಪಡೆಗೆ ನೇಮಕ ಮಾಡಲಾಗುತ್ತದೆ.
ಡಿ.ಆರ್.ಎಫ್.ಓ ನೇತೃತ್ವದಲ್ಲಿ ನಾಲ್ಕು ತಂಡಗಳಾಗಿ ವಿಂಗಡನೆ.
ಒಂದೊಂದು ತಂಡದಲ್ಲಿ ಇಬ್ಬರು ಅರಣ್ಯ ಪಾಲಕರು,ಓರ್ವ ವಾಹನ ಚಾಲಕ,ಹತ್ತು ಮಂದಿ ಹೊರಗುತ್ತಿಗೆ ನೌಕರರನ್ನ ಒಳಗೊಂಡ ತಂಡ ರಚಿಸಲಾಗುವುದು.ಪ್ರತಿ ತಂಡವು ಚಿರತೆ ಹಾವಳಿ ಇರುವ ಕಡೆ ಗಸ್ತು ತಿರುಗುತ್ತಿರುತ್ತಾರೆ.ಜನವಸತಿ ಪ್ರದೇಶಗಳ ಕಡೆ ಚಿರತೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತಂಡ ರಚನೆ ಮಾಡಲಾಗುವುದು ದಿನದ 24 ಗಂಟೆ ಕಾರ್ಯಪಡೆಯಿಂದ ಕಾರ್ಯ ನಿರ್ವಹಣೆಯಾಗುವುದು ಎಂದು ಎಸಿಎಫ್ ಸೌರಭ್ ಕುಮಾರ್ ತಿಳಿಸಿದರು.

Share Post