ಮತದಾರರಿಗೆ 32 ಇಂಚಿನ ಎಲ್‌ಇಡಿ ಟಿವಿ ವಿತರಿಸಿದ ಭೈರತಿ ಸುರೇಶ್
ಬೆಂಗಳೂರು; ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರಿಗೆ ಅನೇಕ ಆಮಿಷಗಳನ್ನು ಒಡ್ಡಲಾಗುತ್ತಿದೆ. ಕೆಲವರು ಮತದಾರರಿಗೆ ಕುಕ್ಕರ್, ಮಿಕ್ಸರ್ ಮುಂತಾದವುಗಳನ್ನು ಕೊಡುತ್ತಿದ್ದಾರೆ. ಇತ್ತ ಹೆಬ್ಬಾಳ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್, ಮತದಾರರಿಗೆ ಎಲ್‌ಇಡಿ ಟಿವಿ ವಿತರಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಠಿ ಎಂಬಂತೆ ವಿಡಿಯೋ ಒಂದು ವೈರಲ್ ಆಗುತ್ತಿದೆ.
32 ಇಂಚಿನ ಎಲ್ಇಡಿ ಟಿವಿಯನ್ನು ಶಾಸಕ ಭೈರತಿ ಸುರೇಶ್ ವಿತರಣೆ ಮಾಡುತ್ತಿದ್ದಾರೆ. ಆ ಟಿವಿ ಪರದೆಯಲ್ಲಿ ತಮ್ಮ ಫೋಟೋ ಬರುವಂತೆ ಶಾಸಕ ಭೈರತಿ ಸುರೇಶ್ ವ್ಯವಸ್ಥೆ ಮಾಡಿದ್ದಾರೆ.