ಫೇಸ್ಬುಕ್ನಲ್ಲಿ ಪರಿಚಯವಾದಾಕೆ ಸಾವನ್ನಪ್ಪಿದ್ದು ಹೇಗೆ..?
ಹಾಸನ; ಫೇಸ್ಬುಕ್ನಲ್ಲಿ ಪರಿಚಯ. ಅದು ಪ್ರೀತಿಯಾಗಿ ಲಿವ್ ಇನ್ ರಿಲೇಷನ್ಶೀಪ್ವೆರಗೂ ಹೋಗಿತ್ತು. ಆದ್ರೆ ಅದೇನಾಯ್ತೋ ಏನೋ ಯುವತಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ. ಪ್ರೀತಿಸಿದ ಯುವಕನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಸಿರಸ್ ಅಲಿಯಾಸ್ ಸಿರಿ ಎಂಬಾಕೆಯೇ ಸಾವನ್ನಪ್ಪಿರುವ ಮಹಿಳೆ. ಈಕೆ ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ದಳು. ಈಕೆಗೆ ಹಾಸನ ಜಿಲ್ಲೆ ಕಟ್ಟಾಯ ಹೋಬಳಿ ಮಾರನಾಯಕನಹಳ್ಳಿ ಗ್ರಾಮದ ಆದರ್ಶ್ ಪರಿಚಯವಾಗಿದ್ದ. ಆ ಪರಿಚಯ ಪ್ರೀತಿಗೆ ತಿರುಗಿದ್ದು, ಆದರ್ಶ್ಗಾಗಿ ಸಿರಿ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದಳು. ಹಾಸನದ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ಇಬ್ಬರೂ ವಾಸವಿದ್ದರು. ಇಬ್ಬರೂ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ಆದ್ರೆ ಅದೇನಾಯ್ತೋ ಏನೋ ಸಿರಿ ಸಾವನ್ನಪ್ಪಿದ್ದಾನೆ. ಮನೆಗೆ ಬೀಗ ಜಡಿದಿದೆ. ಆರೋಪಿ ಆದರ್ಶ್ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ.