ರಾಜ್ಯದ ಮುಳ್ಳಯ್ಯನಗಿರಿ – ದತ್ತ ಪೀಠ ರೋಪ್ವೇ ಪ್ರಸ್ತಾವನೆ ಒಪ್ಪದ ಕೇಂದ್ರ
ನವದೆಹಲಿ; ರಾಜ್ಯ ಸಕಾ೯ರದ ಮಹತ್ವಾಕಾಂಕ್ಷೆಯ ಮುಳ್ಳಯ್ಯನಗಿರಿಯಿಂದ ದತ್ತಪೀಠ ಪರ್ವತ ಶ್ರೇಣಿಗಳ ನಡುವಿನ ರೋಪ್ವೇ ಯೋಜನೆಯನ್ನು ಕೇಂದ್ರ ಸರ್ಕಾರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ತಿರಸ್ಕರಿಸಿದೆ . ಇದರಿಂದಾಗಿ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಈ ಪ್ರದೇಶದಲ್ಲಿ ಪ್ರವಾಸಿಗರನ್ನ ಸೆಳೆಯಲು , ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಾಲಾ ಯೋಜನೆಯಡಿಯಲ್ಲಿ ಕರ್ನಾಟಕದ ಅತಿ ಎತ್ತರದ ಪರ್ವತ ಪ್ರದೇಶವಾದ ಮುಳ್ಳಯ್ಯನಗಿರಿಯಿಂದ ದತ್ತಪೀಠಕ್ಕೆ ರೋಪ್ವೇ ನಿರ್ಮಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು 2022-23ರ ಬಜೆಟ್ನಲ್ಲಿ ಘೋಷಿಸಿತು. ಅದರಂತೆ ಪರ್ವತ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಕೇಂದ್ರವು ಕೆಲವು ತಾಂತ್ರಿಕ ಆಧಾರದ ಮೇಲೆ ಯೋಜನೆಯನ್ನು ಪರಿಗಣಿಸಲಿಲ್ಲ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ-ದತ್ತ ಪೀಠವನ್ನು ಪರ್ವತ ಮಾಲಾ ಯೋಜನೆಯಡಿ ಆಯ್ಕೆ ಮಾಡಿಲ್ಲ.
ಹಾಗಾಗಿ ರಾಜ್ಯ ಸಕಾ೯ರದ ಪ್ರಸ್ತಾವನೆಯನ್ನು ಕೇಂದ್ರ ಪರಿಗಣಿಸಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ಆದರೆ ಈ ವಿಷಯವನ್ನು ಮತ್ತೊಮ್ಮೆ ಮುಂದಿನ ವರ್ಷ ಹೊಸ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದೇವೆ. ಯೋಜನೆಯ ಅಗತ್ಯತೆ ಮತ್ತು ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಎಂಬ ವಿಷಯವನ್ನು ನಾವು ಕೇಂದ್ರಕ್ಕೆ ತಿಳಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.