Districts

ಮೈಸೂರಿನಲ್ಲಿ ಮೋದಿ ಸಹೋದರನ ಕಾರು ಅಪಘಾತ

ಮೈಸೂರು; ಮೈಸೂರಿನಲ್ಲಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತವಾಗಿದೆ. ಮೋದಿಯವರ ಅಣ್ಣ ಪ್ರಹ್ಲಾದ್‌ ಮೋದಿ ಹಾಗೂ ಅವರ ಪುತ್ರ ಹಾಗೂ ಸೊಸೆ ಪ್ರಯಾಣಿಸುತ್ತಿದ್ದ ಬೆಂಜ್‌ ಕಾರು ಮೈಸೂರಿನ ಕಡಕೋಳ ಬಳಿ ಅಪಘಾತಕ್ಕೀಡಾಗಿದೆ. ಪ್ರಹ್ಲಾದ್‌ ಮೋದಿ ಪುತ್ರ ಹಾಗೂ ಸೊಸೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಕಾರಿನ ಮುಂಭಾಗ ಜಖಂಗೊಂಡಿದೆ. ಪ್ರಹ್ಲಾದ್‌ ಮೋದಿಯವರು ಕುಟುಂಬ ಸಮೇತ ಬಂಡೀಪುರಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮೈಸೂರು ಎಸ್ ಪಿ ಸೀಮಾ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.

Share Post