CinemaNational

ಕೊನೆಗೂ ಶುಭ ಸುದ್ದಿ ಕೊಟ್ಟ ರಾಮ್‌ ಚರಣ್‌ ಹಾಗೂ ಉಪಾಸನಾ ದಂಪತಿ

ಹೈದರಾಬಾದ್‌; ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಈಗ ಸಂತಸ ಮನೆ ಮಾಡಿದೆ. ಚಿರು ಪುತ್ರ ಹಾಗೂ ಖ್ಯಾತ ನಟ ರಾಮ್ ಚರಣ್ ಅಪ್ಪನಾಗುತ್ತಿದ್ದಾರೆ. ಈ ಸುದ್ದಿ ಕೇಳಿ ಮೆಗಾಸ್ಟಾರ್‌ ಕುಟುಂಬ ಫುಲ್‌ ಖುಷಿಯಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ನಟ ಚಿರಂಜೀವಿ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ರಾಮ್ ಚರಣ್ ಮತ್ತು ಉಪಾಸನಾ ಪ್ರೀತಿಸಿ, ಜೂನ್ 14, 2012ರಂದು ಮದುವೆಯಾಗಿದ್ದರು. ವಿವಾಹವಾಗಿ ಹತ್ತು ವರ್ಷವಾದರೂ ಮಗು ಆಗಿರಲಿಲ್ಲ. ಈ ಬಗ್ಗೆ ಎಲ್ಲರೂ ಕೇಳುತ್ತಿದ್ದರು. ಇದೀಗ ಈ ಜೋಡಿ ಶುಭ ಸುದ್ದಿ ಕೊಟ್ಟಿದೆ. ರಾಮ್ ಚರಣ್ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಸ್ವತಃ ಚಿರಂಜೀವಿ ಹೇಳಿಕೊಂಡಿದ್ದಾರೆ.

Share Post