CrimeNational

ಪಿಕ್‌ನಿಕ್‌ ಹೋಗಿದ್ದ ಶಾಲಾ ಬಸ್‌ ಪಲ್ಟಿ; ಇಬ್ಬರು ವಿದ್ಯಾರ್ಥಿಗಳು ದುರ್ಮರಣ

ಮುಂಬೈ; ಶಾಲಾ ಬಸ್‌ ಪಲ್ಟಿಯಾಗಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿರುವ ಘಟನೆ ಮುಂಬೈ ಬಳಿ ನಡೆದಿದೆ. ಪಿಕ್‌ನಿಕ್‌ ಮುಗಿಸಿ ವಾಪಸ್‌ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕೋಚಿಂಗ್ ತರಗತಿ ವಿದ್ಯಾರ್ಥಿಗಳು ವೀಕೆಂಡ್‌ ಪಿಕ್‌ನಿಕ್‌ ಹೋಗಿದ್ದರು. ವಾಪಸ್‌ ಬರುತ್ತಿದ್ದ ವೇಳೆ ರಾಯಗಢ ಜಿಲ್ಲೆಯ ಖೋಪೋಲಿ ಎಂಬಲ್ಲಿ ಬಸ್‌ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಹಲವು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂಬೈನ ಚೆಂಬೂರ್‌ನಲ್ಲಿರುವ ಕೋಚಿಂಗ್ ಕೇಂದ್ರದ 10ನೇ ತರಗತಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಒಟ್ಟು 48 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಬಸ್‌ನಲ್ಲಿದ್ದರು. ಲೋನಾವಾಲಾಗೆ ಹೋಗಿದ್ದ ವಿದ್ಯಾರ್ಥಿಗಳು ಪಿಕ್‌ನಿಕ್‌ನಲ್ಲಿ ಎಂಜಾಯ್‌ ಮಾಡಿ ಖುಷಿಯಿಂದ ವಾಪಸ್ಸಾಗುತ್ತಿದ್ದರು.

Share Post