ಡಿಸೆಂಬರ್ 1 ರಿಂದ ಡಿಜಿಟಲ್ ರೂಪಾಯಿ ಚಲಾವಣೆ; ಬೆಂಗಳೂರಲ್ಲಿ ಫಸ್ಟ್
ನವದೆಹಲಿ; ಭಾರತದ ಡಿಜಿಟಲ್ ರೂಪಾಯಿ ಸದ್ಯದಲ್ಲೇ ಪರಿಚಯವಾಗಲಿದೆ. ಡಿಸೆಂಬರ್ 1 ರಿಂದ ರೀಟೈಲ್ ಡಿಜಿಟಲ್ ರೂಪಾಯಿಯನ್ನು ಚಲಾವಣೆಗೆ ತರಲು ಆರ್‌ಬಿಐ ತೀರ್ಮಾನ ಮಾಡಿದೆ. ಪ್ರಾಯೋಗಿಕವಾಗಿ ಡಿಸೆಂಬರ್ 1 ರಿಂದ ಬೆಂಗಳೂರಿನಲ್ಲಿ ಡಿಜಿಟಲ್ ರೂಪಾಯಿ ಚಲಾವಣೆಯಾಗಲಿದೆ ಎಂದು ತಿಳಿದುಬಂದಿದೆ.
ಬೆಂಗಳೂರು, ಮುಂಬೈ, ದೆಹಲಿ, ಭುವನೇಶ್ವರದಲ್ಲಿ ಡಿಸೆಂಬರ್ 1ರಿಂದ ಈ ಪ್ರಯೋಗ ನಡೆಯಲಿದೆ. ಆಯ್ದ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿಯ ವ್ಯವಹಾರ ನಡೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳು ನಡೆಯಲಿವೆ ಎಂದು ಆರ್‌ಬಿಐ ಅಧಿಕಾರಿಗಳು ಹೇಳಿದ್ದಾರೆ.
ಎಸ್‌ಬಿಐ, ಐಸಿಐಸಿಐ ಸೇರಿ ನಾಲ್ಕು ಬ್ಯಾಂಕ್‌ಗಳು ಈ ಡಿಜಿಟಲ್ ರೂಪಾಯಿ ರಿಲೀಸ್ ಮಾಡಲಿವೆ. ಈ ನಾಲ್ಕು ಬ್ಯಾಂಕ್‌ಗಳು ಒದಗಿಸುವ ಡಿಜಿಟಲ್ ವಾಲೆಟ್ ಸಹಾಯದೊಂದಿಗೆ ಡಿಜಿಟಲ್ ವ್ಯವಹಾರ ನಡೆಸಬಹುದು.