Districts

ಜನವಸತಿ ಪ್ರದೇಶದಲ್ಲಿ ಹಸು ಬೇಟೆಯಾಡಿದ ಹುಲಿ

ಚಾಮರಾಜನಗರ; ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಊಟಿಯ ಹಿಂದೂಸ್ತಾನ್‌ ಫೋಟೊ ಫಿಲ್ಮ್ಸ್‌ ಬಳಿ ಹುಲಿಯೊಂದು ಹಸುವನ್ನು ಕೊಂದಿದೆ. ಹಾಡಹಗಲೇ ಜನವಸತಿ ಪ್ರದೇಶಕ್ಕೆ ಮುಗ್ಗಿದ ಹುಲಿ ಹಸುವನ್ನು ಕೊಂದಿದೆ.

ಇಂದುನಗರ ಎಂಬ ಜನವಸತಿ ಪ್ರದೇಶದಲ್ಲಿ ಈ ದೃಶ್ಯ ಕಂಡುಬಂದಿದೆ. ಹಸುವಿನ ಮೃತದೇಹದ ಮುಂದೆ ಹಲಿ ನಿಂತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ, ಇದು ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Share Post