ನವಜಾತ ಶಿಶುವಿನ ಹೊಟ್ಟೆಯಲ್ಲಿ 8 ಭ್ರೂಣ ಪತ್ತೆ
ರಾಂಚಿ; 21 ದಿನಗಳ ನವಜಾತ ಶಿಶುವಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿದ್ದು, ಅವುಗಳನ್ನು ರಾಂಚಿಯ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಒಂದು ಚೀಲದಂತಹ ರಚನೆಯಲ್ಲಿ ಮೂರು ಸೆಂಟಿಮೀಟರ್ ಗಾತ್ರದ ಭ್ರೂಣಗಳು ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದವು. ಅದನ್ನು ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಭ್ರೂಣದೊಳಗೆ ಭ್ರೂಣ ಸೇರಿರುವುದರಿಂದ ಹೀಗೆ ಆಗಿದೆ. ಇಂತಹ ಸನ್ನಿವೇಶಗಳು ಎದುರಾಗೋದು ಅತ್ಯಂತ ಅಪರೂಪ ಎಂದಿರುವ ವೈದ್ಯರು, ಎಫ್‌ಐಎಫ್‌ನಂತ ಪ್ರಕರಣಗಳಲ್ಲಿ ಸರಿಯಾಗಿ ಬೆಳವಣಿಗೆಯಾಗದ ಭ್ರೂಣವು ತನ್ನ ಅವಳಿಯ ಹೊಟ್ಟೆಯಲ್ಲಿ ಸೇರಿರುತ್ತದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 10ರಂದು ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಈ ಮಗುವಿಗೆ ಜನ್ಮ ನೀಡಿದ್ದರು. ಇದೇ ವೇಳೆ ಮಗುವಿನ ಹೊಟ್ಟೆಯಲ್ಲಿ ಗಡೆ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಭವಿಷ್ಯದಲ್ಲಿ ಇದು ತೊಂದರೆಯಾಗಬಾರದು ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸೂಚಿಸಿದ್ದರು. ಅದರಂತೆ ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಅದು ಗಡ್ಡೆಯಲ್ಲ, ಭ್ರೂಣಗೂ ಎಂಬುದು ಖಾತ್ರಿಯಾಗಿದೆ.