Bengaluru

ಚಪ್ಪಲಿ ಸ್ಟ್ಯಾಂಡ್‌ ಟೆಂಡರ್‌ ವಿವಾದ; ಸಿದ್ದರಾಮಯ್ಯ ಸರ್ಕಾರದ ಮೇಲೆ ಬಿಜೆಪಿ ಆರೋಪ

ಬೆಂಗಳೂರು; ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್‌ ಟೆಂಡರ್‌ ಪರಿಶಿಷ್ಟರಿಗೆ ಮೊದಲು ಮೀಸಲಿಟ್ಟಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ಬಿಜೆಪಿ ಆರೋಪ ಮಾಡಿದೆ. ದೇವಸ್ಥಾನ ಹಲವು ವಿಭಾಗಗಳನ್ನು ನೋಡಿಕೊಳ್ಳಲು ಟೆಂಡರ್‌ ಕರೆಯಲಾಗಿದ್ದು, ಚಪ್ಪಲಿ ಸ್ಟ್ಯಾಂಡ್‌ ಪರಿಶಿಷ್ಟರಿಗೆ ಮೀಸಲಿಡಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇದಕ್ಕೆ ಸಮಜಾಯಿಷಿ ನೀಡಿರುವ ಬಿಜೆಪಿ, ಈ ರೀತಿಯ ಟೆಂಡರ್‌ನ್ನು ಸಿದ್ದರಾಮಯ್ಯ ಸರ್ಕಾರದಲ್ಲೇ ಕರೆಯಲಾಗಿತ್ತು ಎಂದು ಹೇಳಿದೆ.

ಮುಜರಾಯಿ ದೇವಾಲಯಗಳಲ್ಲಿ ಉಳಿದೆಲ್ಲಾ ಟೆಂಡರ್ ಸಾಮಾನ್ಯ ವರ್ಗಕ್ಕೆ ನೀಡಲಾಗುತ್ತಿದ್ದು, ಚಪ್ಪಲಿ ಕಾಯುವುದು ಮಾತ್ರ ದಲಿತರಿಗೆ ಮೀಸಲಿಡಲಾಗಿದೆ. ಇದು ಸರ್ಕಾರಿ ಅಸ್ಪೃಶ್ಯತೆ, ದಲಿತರನ್ನು ಚಪ್ಪಲಿ ಕಾಯಲು ಸೀಮಿತಗೊಳಿಸಿ ಬಿಜೆಪಿ ಸರ್ಕಾರ ಮನುಸ್ಮೃತಿ ಪಾಲಿಸುತ್ತಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ದೂರಿದ್ದರು. ಈ ಬೆನ್ನಲ್ಲೇ ಇದೇ ರೀತಿಯ ಆದೇಶ ಸಿದ್ದರಾಮಯ್ಯ ಸರ್ಕಾರದಲ್ಲೂ ನೀಡಲಾಗಿತ್ತು ಎಂದು ಆದೇಶದ ಸಮೇತ ಟ್ವೀಟ್‌ ಮಾಡಿ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

Share Post