ಕುಡುಕ ಗಂಡನ ಕಿರುಕುಳಕ್ಕೆ ಬೇಸರ; ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ
ಚಿತ್ರದುರ್ಗ; ಕುಡಿದು ಬಂದು ದಿನವೂ ಕಿರುಕುಳ ನೀಡುತ್ತಿದ್ದ ಗಂಡನಿಂದ ಬೇಸತ್ತು ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ಡ್ಯಾಮ್ಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸದುರ್ಗ ಬಳಿಯ ಮಳಲಿ ಗ್ರಾಮದಲ್ಲಿ ನಡೆದಿದೆ. ಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾ(28) ಹಾಗೂ ಆಕೆಯ ಮಗಳು ಮಾನಸ(6), ಮಗ ಮದನ್(4) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಎಂಟು ವರ್ಷದ ಹಿಂದೆ ಅರ್ಪಿತಾರನ್ನು ಮದುವೆಯಾಗಿದ್ದ. ಆದ್ರೆ, ಮೊದಲಿನಿಂದಲೂ ಹೆಂಡತಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಎಂದು ಹೇಳಲಾಗಿದೆ. ನಿತ್ಯ ಮದ್ಯಪಾನ ಮನೆಗೆ ಬರುತ್ತಿದ್ದ ಆತ, ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತು ಅರ್ಪಿತಾ ಅವರು ತನ್ನಿಬ್ಬರ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆಗೂ ಮುನ್ನ ಅರ್ಪಿತಾ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾಳೆ.